Sunday, August 30, 2026
spot_imgspot_img
spot_imgspot_img

ಕರೆಂಟ್ ಶಾಕ್ ಹೊಡೆದು ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಸಾವು

- Advertisement -
- Advertisement -

ಕುಣಿಗಲ್: ಜೂನಿಯರ್ ರವಿಚಂದ್ರನ್ ಖ್ಯಾತಿಯ ಕಲಾವಿದ ಲಕ್ಷ್ಮೀ ನಾರಾಯಣ್ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ಧಾರೆ.

ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿಯ ಹೇರೂರು ಗ್ರಾಮದ ಲಕ್ಷ್ಮೀ ನಾರಾಯಣ್ (35) ಇಂದು ತಮ್ಮ ಮನೆಯಲ್ಲಿರುವ ಸಂಪ್ ಗೆ ನೀರು ಬಿಡಲು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ. ಈ ವೇಳೆ ಕರೆಂಟ್ ಶಾಕ್ ನಿಂದ ಲಕ್ಷ್ಮೀ ನಾರಾಯಣ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

vtv vitla
vtv vitla

ಲಕ್ಷ್ಮೀ ನಾರಾಯಣ್ ರಾಜ್ಯದೆಲ್ಲೆಡೆ ಸಂಗೀತ ಸಂಜೆ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಹಾಡು ಹೇಳಿ ಜನರನ್ನು ರಂಜಿಸುತ್ತಿದ್ದರು. ಜೊತೆಗೆ ರವಿಚಂದ್ರನ್ ಅವರಂತೆಯೇ ಕಾಣುತ್ತಿದ್ದ ಅವರು ರವಿಚಂದ್ರನ್ ಅಭಿನಯದ ದೃಶ್ಯಗಳನ್ನು ವೇದಿಕೆ ಮೇಲೆ ಅಭಿನಯಿಸುವ ಮೂಲಕ ಜನರ ಮನಗೆದ್ದಿದ್ದರು.

- Advertisement -

Related news

error: Content is protected !!