Saturday, May 18, 2024
spot_imgspot_img
spot_imgspot_img

ಕರೆ ಮಾಡಿದಾಗ ಕೇಳುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಸ್ಥಗಿತ

- Advertisement -G L Acharya panikkar
- Advertisement -

ನವದೆಹಲಿ: ಯಾರಿಗಾದರೂ ಪೋನ್ ಕರೆ ಮಾಡಿದಾಗ ಕೇಳಿಬರುತ್ತಿದ್ದ ಕೊರೊನಾ ಜಾಗೃತಿ ಸಂದೇಶ ಶೀಘ್ರದಲ್ಲೆ ಸ್ಥಗಿತಗೊಳ್ಳಲಿದೆ. ಸುಮಾರು ಎರಡು ವರ್ಷಗಳ ಕಾಲ ಮೊಬೈಲ್ʼನಲ್ಲಿ ನಿರಂತರವಾಗಿ ಕೇಳಿಬರುತ್ತಿದ್ದ ಕಾಲರ್ ಟ್ಯೂನ್ ಈಗ ತೆಗೆದು ಹಾಕಲು ಸರ್ಕಾರ ಯೋಚಿಸುತ್ತಿದೆ.

ಈ ಹಿಂದೆ ಕೋವಿಡ್ ವೈರಸ್ ಬಗ್ಗೆ ಜಾಗೃತಿ ಮೂಡಿಸಲು ಮೊಬೈಲ್ ಫೋನ್‌ಗಳಲ್ಲಿ ಕೊರೊನಾ ಕಾಲರ್ ಟ್ಯೂನ್‌ಗಳನ್ನ ಬಳಸಲಾಗುತ್ತಿತ್ತು. ಎಲ್ಲ ಮೊಬೈಲ್‌ಗಳಲ್ಲಿ ಕೊರೊನಾ ಕಾಲರ್ ಟ್ಯೂನ್ ಪ್ಲೇ ಆಗುತ್ತಿದ್ದ ಉದ್ದೇಶ ಈಗ ಈಡೇರಿದೆ. ಈ ಕಾಲರ್ ಟ್ಯೂನ್ ನಿಲ್ಲಿಸುವಂತೆ ಹಲವರು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ಪ್ರಮುಖ ಕರೆಗಳು ವಿಳಂಬವಾಗುತ್ತವೆ ಈ ಕಾಲರ್ ಟ್ಯೂನ್ ಪ್ರಮುಖ ಕರೆಗಳನ್ನ ಹಿಡಿದಿಟ್ಟುಕೊಳ್ಳುವ ಮತ್ತು ತುರ್ತು ಪರಿಸ್ಥಿತಿಯಲ್ಲಿ ಕರೆಗಳನ್ನ ನಿಧಾನಗೊಳಿಸುತ್ತಿತ್ತು. ಇದೀಗ ಕೊರೊನಾ ಪರಿಸ್ಥಿತಿ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಈ ಕಾಲರ್ ಟ್ಯೂನ್ ತೆಗೆಯಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.

vtv vitla
vtv vitla

ಈ ಸಂದೇಶ ತನ್ನ ಉದ್ದೇಶವನ್ನು ಪೂರ್ಣಗೊಳಿಸಿದ ಕಾರಣಕ್ಕೆ ಅದನ್ನು ತೆಗೆದು ಹಾಕುವಂತೆ ಆರೋಗ್ಯ ಇಲಾಖೆಗೆ ಟೆಲಿಕಮ್ಯೂನಿಕೇಶನ್ ವಿಭಾಗ ಪತ್ರ ಬರೆದಿದೆ.

vtv vitla
vtv vitla
- Advertisement -

Related news

error: Content is protected !!