Thursday, May 2, 2024
spot_imgspot_img
spot_imgspot_img

ಕರ್ನಾಟಕ ಕುಸ್ತಿ ತಂಡಕ್ಕೆ ಒಂದು ಚಿನ್ನ ಮತ್ತು 2 ಕಂಚಿನ ಗರಿ

- Advertisement -G L Acharya panikkar
- Advertisement -

“ಉತ್ತರಪ್ರದೇಶದ ಗೊಂಡಾದಲ್ಲಿ ನಡೆಯುತ್ತಿರುವ 17 ವರ್ಷದೊಳಗಿನ ರಾಷ್ಟ್ರೀಯ ಕುಸ್ತಿ ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿರುವ ಕರ್ನಾಟಕ ರಾಜ್ಯ ಕುಸ್ತಿ ಪಟುಗಳಾದ, ಶ್ವೇತ ಅಣ್ಣಕೆರಿ ಚಿನ್ನದ ಪದಕ ಗಳಿಸಿದರೆ, ಮನಿಷ ಸಿದ್ದಿ ಹಾಗೂ ಲಕ್ಷ್ಮೀ ಪಾಟೀಲ್ ಕಂಚಿನ ಪದಕಗಳನ್ನು ಗಳಿಸುವ ಮುಖೇನ ಕರ್ನಾಟಕದ ಕೀರ್ತಿ ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿಯವರು ಅಧಿಕಾರ ವಹಿಸಿಕೊಂಡ ನಂತರ ಮತ್ತು ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕುಸ್ತಿ ತಂಡಕ್ಕೆ ಆಯ್ಕೆಯಾದ ಕುಸ್ತಿಪಟುಗಳ ಪರಿಶ್ರಮದಿಂದ ಇತಿಹಾಸದಲ್ಲೆ ಮೊದಲ ಬಾರಿಗೆ ರಾಷ್ಟೀಯ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿರುವುದು ಕರ್ನಾಟಕದ ಹೆಮ್ಮೆಯಾಗಿದೆ.

ಪದಗಳನ್ನು ಗಳಿಸಿದ ಕುಸ್ತಿಪಟುಗಳಿಗೆ ಭಾರತೀಯ ಕುಸ್ತಿ ಸಂಘದ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮತ್ತು ಕರ್ನಾಟಕದ ಆರೂವರೆ ಕೋಟಿ ಜನತೆಯ ಹಾಗೂ ಎಲ್ಲಾ ಕುಸ್ತಿ ಪಟುಗಳ ಪರವಾಗಿ ಕರ್ನಾಟಕ ಕುಸ್ತಿ ಸಂಘದ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ರವರು ಪದಕ ತೊಡಿಸಿ ಅಭಿನಂದಿಸಿದರು.

- Advertisement -

Related news

error: Content is protected !!