Thursday, July 23, 2026
spot_imgspot_img
spot_imgspot_img

ಕರ್ನಾಟಕ ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೆ.ಯಂ. ಉಸ್ಮಾನುಲ್ ಫೈಝಿ ತೋಡಾರು, ಪ್ರಧಾನ ಕಾರ್ಯದರ್ಶಿಯಾಗಿ ಯಂ.ವೈ.ಅಶ್ರಫ್ ಫೈಝಿ ಕೊಡಗು, ಕೋಶಾಧಿಕಾರಿಯಾಗಿ ಕೆ.ಕೆ. ಸುಲೈಮಾನ್ ಫೈಝಿ ಆಯ್ಕೆ

- Advertisement -
- Advertisement -
vtv vitla
vtv vitla

ವಿಟ್ಲ: ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯ ಅರೆಬಿಕ್ ಕಾಲೇಜ್ ನಲ್ಲಿ ಉನ್ನತ ವ್ಯಾಸಂಗ ಪಡೆದು ‘ಮೌಲವಿ ಫಾಳಿಲ್ ಫೈಝಿ’ ಪದವೀಧರರಾದ ಕರ್ನಾಟಕದ ಉಲಮಾ ಒಕ್ಕೂಟ ಕರ್ನಾಟಕ ರಾಜ್ಯ ಫೈಝೀಸ್ (OSFOJANA) ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮವು ಪುತ್ತೂರು ಬದ್ರಿಯಾ ಸಭಾಂಗಣದಲ್ಲಿ ನಡೆಯಿತು.

ಸಮಸ್ತ ಕೇಂದ್ರ ಮುಶಾವರ ಸದಸ್ಯ ಕೊಡಗು ನಾಯಿಬ್ ಖಾಝಿ ಶೈಖುನಾ ಅಬ್ದುಲ್ಲಾ ಮುಸ್ಲಿಯಾರ್ ಉದ್ಘಾಟಿಸಿದರು
ಸಮಿತಿ ಅಧ್ಯಕ್ಷರಾದ ಕೆ.ಯಂ. ಉಸ್ಮಾನುಲ್ ಫೈಝಿ ತೋಡಾರು ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರಿ ತಂಙಳ್ ಆತೂರು ಝಿಯಾರತ್ ನ ನೇತೃತ್ವ ವಹಿಸಿದ್ದರು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ತೊಟ್ಟಿ ಮಾಹಿನ್ ಮುಸ್ಲಿಯಾರ್ ಮಾತನಾಡಿದರು. ಫಿಕ್ಹ್ ಸೆಮಿನಾರಿನಲ್ಲಿ ತ್ವಲಾಖ್, ಫಸ್ಕ್ ವಿಷಯಾಧಾರಿತ ತರಗತಿಯನ್ನು ಜಾಮಿಅ ಪ್ರೊಫೆಸರ್ ಹಂಝ ಫೈಝಿ ಅಲ್-ಹೈತಮಿ ನಡೆಸಿಕೊಟ್ಟರು.

ಜಾಮಿಅ ಪ್ರೊಫೆಸರ್ ಚುಂಗತ್ತರ ಸುಲೈಮಾನ್ ಫೈಝಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.

ಅಧ್ಯಕ್ಷರಾಗಿ ಕೆ.ಯಂ. ಉಸ್ಮಾನುಲ್ ಫೈಝಿ ತೋಡಾರು, ಉಪಾಧ್ಯಕ್ಷರಾಗಿ ಇಸ್ಮಾಯಿಲ್ ಫೈಝಿ ಕರಾಯ, ಸಲೀಂ ಫೈಝಿ ಹಾಸನ, ಉಮರ್ ಫೈಝಿ ಕೊಡಗು, ಶರೀಫ್ ಫೈಝಿ ಕಡಬ, ಪ್ರಧಾನ ಕಾರ್ಯದರ್ಶಿಯಾಗಿ ಯಂ.ವೈ. ಅಶ್ರಫ್ ಫೈಝಿ ಕೊಡಗು, ಜೊತೆ ಕಾರ್ಯದರ್ಶಿಗಳಾಗಿ ಅಬೂಸ್ವಾಲಿಹ್ ಫೈಝಿ ಅಕ್ಕರಂಗಡಿ, ಸಲೀಂ ಫೈಝಿ ಇರ್ಫಾನಿ ಮೂಡಿಗೆರೆ, ಹಸೈನಾರ್ ಫೈಝಿ ಕೊಡಗು
ಸಂಘಟನಾ ಕಾರ್ಯದರ್ಶಿ ಯಾಗಿ ಕೆ.ಯಂ. ಸಿದ್ದೀಕ್ ಫೈಝಿ ಕರಾಯ, ಇಸ್ಮಾಯಿಲ್ ಫೈಝಿ ಗಟ್ಟಮನೆ, ಮಿಡಿಯಾ ವಿಂಗ್ ಉಸ್ತುವಾರಿಗಳಾಗಿ ಉನೈಸ್ ಫೈಝಿ ಕೊಡಗು, ಮಜೀದ್ ಫೈಝಿ ಕೋಲ್ಪೆ, ಜಮಾಲ್ ಫೈಝಿ ಮೂಡಿಗೆರೆ, ರಝಾಕ್ ಫೈಝಿ ನಾರ್ವೆ ಹಾಗೂ ಕೋಶಾಧಿಕಾರಿ ಯಾಗಿ ಕೆ.ಕೆ. ಸುಲೈಮಾನ್ ಫೈಝಿ ಕನ್ಯಾನ ಆಯ್ಕೆಯಾದರು. 33 ಮಂದಿ ಯನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಆರಿಸಲಾಯಿತು.

ಸಂಘಟನೆಯ ಸಲಹಾ ಸಮತಿ ಸದಸ್ಯರನ್ನಾಗಿ ಶೈಖುನಾ ಮಾಹಿನ್ ಉಸ್ತಾದ್ , ಶೈಖುನಾ ಅಬ್ದುಲ್ಲಾ ಉಸ್ತಾದ್ ಕೊಡಗು, ಶೈಖುನಾ ಸುಲೈಮಾನ್ ಫೈಝಿ ಚುಂಗತ್ತರ, ಮೂಸಲ್ ಫೈಝಿ ಪಾಟ್ರಕೋಡಿ , ಉಸ್ಮಾನ್ ಫೈಝಿ ಕೊಡಗು, ಅಸ್ಗರ್ ಫೈಝಿ ಬೊಳ್ಳೂರು, ಅಬ್ದುಲ್ ಅಝೀಝ್ ಫೈಝಿ ಪಟ್ಟೋರಿ ಇವರನ್ನು ನೇಮಕ ಮಾಡಲಾಯಿತು.

vtv vitla
vtv vitla

ಇದೇ ವೇಳೆ ದ.ಕ, ಕೊಡಗು, ಹಾಸನ, ಉಡುಪಿ, ಚಿಕ್ಕ ಮಂಗಳೂರು, ಉತ್ತರ ಕನ್ನಡ ಜಿಲ್ಲೆಗಳಿಂದ ಆಗಮಿಸಿದ ಫೈಝಿಗಳಿಗೆ ಸಮಿತಿಯ ಗುರುತಿನ ಚೀಟಿ ವಿತರಿಸಲಾಯಿತು. ಜಿಲ್ಲೆಯಾದ್ಯಂತ ರೇಂಜ್ ಮಟ್ಟದಲ್ಲಿ ನಡೆಯುವ ಜಾಮಿಅ ತವಾಸುಲ್ ಜಿಲ್ಲಾ ಮಟ್ಟದ ಕಾರ್ಯಕ್ರಮದ ಉದ್ಘಾಟನೆ ನಡೆಸಲಾಯಿತು.

ಸಮಿತಿ ಪ್ರಧಾನ ಕಾರ್ಯದರ್ಶಿ ಯಂ.ವೈ.ಅಶ್ರಫ್ ಫೈಝಿ ಕೊಡಗು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸಿದ್ದಿಕ್ ಫೈಝಿ ಕರಾಯ ವಂದಿಸಿದರು.

suvarna gold
- Advertisement -

Related news

error: Content is protected !!