Tuesday, April 30, 2024
spot_imgspot_img
spot_imgspot_img

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯ ವೇಳಾಪಟ್ಟಿ ಪ್ರಕಟ; ನಿಜಾಂಶವೇನು ಗೊತ್ತಾ?

- Advertisement -G L Acharya panikkar
- Advertisement -

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಗರಿಗೆದರಿದೆ. ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಎಲೆಕ್ಷನ್ ಯಾವಾಗ ನಡೆಯುತ್ತದೆ ಎಂಬ ಪೋಸ್ಟರ್ ಒಂದು ಹರಿದಾಡುತ್ತಿದೆ. ‌ಈ ಸುದ್ದಿಯ ಸತ್ಯಾಂಶ ಏನು ಎಂದು ಗಮನಿಸಿದಾಗ ಇದೊಂದು ಎಡಿಟೆಡ್ ಪೋಸ್ಟರ್. ಈ ಬಗ್ಗೆ ಭಾರತೀಯ ಚುನಾವಣೆ ಆಯೋಗವು ಅಧಿಕೃತವಾಗಿ ಚುನಾವಣಾ ವೇಳಾಪಟ್ಟಿ ಪ್ರಕಟಿಸಬೇಕಿದೆ. ಈ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಈ ವೇಳಾಪಟ್ಟಿ ಫುಲ್ ವೈರಲ್ ಆಗುತ್ತಿದೆ.

ಮೇಲೆ ತೋರಿಸಿದ ಪೋಸ್ಟರ್‌ ನಿಜವೇನೋ ಎಂಬಂತೆ ವೈರಲ್ ಆಗುತ್ತಿದೆ. ಆದರೆ ಇದು 2018ರ ಕರ್ನಾಟಕ ವಿಧಾನಸಭೆಯ ವೇಳಾಪಟ್ಟಿ. ಯಾರೋ ಕಿಡಿಗೇಡಿಗಳು ಎಡಿಟ್ ಮಾಡಿದ್ದಾರೆ. ಅದರಲ್ಲಿ ವಿಧಾನಸೌಧದ ಚಿತ್ರ ಸಹಿತ ನೀತಿ ಸಂಹಿತಿ ಜಾರಿ , ಚುನಾವಣಾ ಅಧಿಸೂಚನೆ ಪ್ರಕಟ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ, ನಾಮಪತ್ರಗಳ ಪರಿಶೀಲನೆ, ಮತದಾನ, ಮತ ಎಣಿಕೆ ಎಂಬೆಲ್ಲ ಅಂಶಗಳನ್ನು ದಿನಾಂಕ ಸಹಿತ ಸೇರಿಸಲಾಗಿದೆ. ಆದರೆ ಇದು ಐದು ವರ್ಷಗಳ ಹಿಂದಿನ (2018ರ) ಚುನಾವಣೆಯ ವೇಳಾಪಟ್ಟಿ ಎಂಬುದು ಖಚಿತವಾಗಿದೆ. ಹೀಗಿದ್ದರೂ ಇದೇ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಮೇ ಹೊತ್ತಿಗೆ ರಾಜ್ಯ ಚುನಾವಣೆ ಕರ್ನಾಟಕ ಸೇರಿದಂತೆ 2023 ರಲ್ಲಿ ಮೇ ಆಸುಪಾಸಿಗೆ ಒಟ್ಟು ಒಂಬತ್ತು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಇದಕ್ಕಾಗಿ ಈಗಾಗಲೇ ಭಾರತೀಯ ಚುನಾವಣೆ ಆಯೋಗ, ಕರ್ನಾಟಕ ಸೇರಿದಂತೆ ಆಯಾ ರಾಜ್ಯಗಳ ರಾಜ್ಯ ಚುನಾವಣೆ ಆಯೋಗವು ಸಿದ್ಧತೆಗಳಲ್ಲಿ ತೊಡಗಿವೆ.

- Advertisement -

Related news

error: Content is protected !!