- Advertisement -
- Advertisement -
ಖಾಸಗಿ ಹೋಟೆಲ್‌ನ 19ನೇ ಫ್ಲೋರ್‌ನಿಂದ ಜಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತ ಯುವಕನನ್ನು ತಮಿಳುನಾಡು ಮೂಲದ ಶರಣ್ (28) ಎಂದು ಗುರುತಿಸಲಾಗಿದೆ.
ಈತ ಭಾನುವಾರ ಹೋಟೆಲ್‌ಗೆ ಬಂದು ಚೆಕ್ ಇನ್ ಆಗಿದ್ದು, ಬ್ಯುಸಿನೆಸ್ ವಿಚಾರವಾಗಿ ಬಂದಿರುವುದಾಗಿ ರಿಸೆಪ್ಷನ್ ಬುಕ್‌ನಲ್ಲಿ ದಾಖಲು ಮಾಡಿದ್ದನು. ಈ ಹಿಂದೆ ಕೂಡ ಈತ ಹೋಟೆಲ್‌ಗೆ ಬಂದು ಉಳಿದುಕೊಂಡಿದ್ದು, ಈ ಬಾರಿ ಎರಡು ದಿನ ಉಳಿಯೋದಾಗಿ ಹೋಟೆಲ್ ಸಿಬ್ಬಂದಿಗೆ ಹೇಳಿದ್ದನು.
ಆತ್ಮಹತ್ಯೆ ಮಾಡಿಕೊಳ್ಳುವ ಅರ್ಧಗಂಟೆಗೆ ಮೊದಲು ಈತ ತನ್ನ ರೂಮಿನಿಂದ ಹೊರಗೆ ಬಂದು ಬಾಲ್ಕನಿಯಲ್ಲಿ ಕುಳಿತಿದ್ದು, ಆತ್ಮಹತ್ಯೆ ಮಾಡಿಕೊಳ್ಳಬೇಕೋ ಬೇಡವೋ ಎಂದು ಯೋಚಿಸಿದ್ದ ಎಂದು ಶಂಕಿಸಲಾಗಿದೆ. . ಘಟನಾ ಸ್ಥಳಕ್ಕೆ ಹೈಗ್ರೌಂಡ್ಸ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
- Advertisement -