Saturday, June 13, 2026
spot_imgspot_img
spot_imgspot_img

ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317d ವತಿಯಿಂದ ಸಮಾಜದ ಬಡ ಮಕ್ಕಳ ಶಿಕ್ಷಣ ಮತ್ತು ಆಹಾರ ಅವಶ್ಯಕತೆಗಳ ಪೂರೈಕೆ ಕಾರ್ಯಕ್ರಮ

- Advertisement -
- Advertisement -

ಅಕ್ಷಯಪಾತ್ರ ಫೌಂಡೇಶನ್‌ಗೆ ರೂ 25 ಲಕ್ಷದ ಫುಡ್ ಟ್ರಕ್ ಹಸ್ತಾಂತರ

ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317d ವತಿಯಿಂದ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಫೌಂಡೇಶನ್ (LCIF) ಸಹಕಾರದೊಂದಿಗೆ ಸಮಾಜದ ಬಡ ಮಕ್ಕಳ ಶಿಕ್ಷಣ ಮತ್ತು ಆಹಾರ ದ ಅವಶ್ಯಕತೆಗಳನ್ನು ಪೂರೈಸುವ ಉದಾತ್ತ ಕಾರ್ಯಕ್ರಮದಲ್ಲಿ ರೂ 25 ಲಕ್ಷ ಫುಡ್ ಟ್ರಕ್ ಅನ್ನು ಜಿಲ್ಲಾ ರಾಜ್ಯಪಾಲರಾದ ಕುಡುಪಿ ಅರವಿಂದ ಶೆಣೈ ಯವರು ಅಕ್ಷಯಪಾತ್ರ ಫೌಂಡೇಶನ್ ಗೆ ಹಸ್ತಾಂತರಿಸಿದರು.

ಈ ಕಾರ್ಯಕ್ರಮದಲ್ಲಿ ಅಕ್ಷಯ ಪಾತ್ರೆ ಫೌಂಡೇಶನ್ ಉಪಾಧ್ಯಕ್ಷರಾದ ಸನಂದನ ದಾಸ್ ಪ್ರಭು ಹಾಗೂ ನಕುಲ್ ಕೃಷ್ಣ ದಾಸ್ ಪ್ರಭು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಕಾರ್ಯಕ್ರಮದಲ್ಲಿ ಪ್ರಥಮ ಉಪರಾಜ್ಯಪಾಲ ಗೋವರ್ಧನ್ ಶೆಟ್ಟಿ, ದ್ವಿತೀಯ ಉಪರಾಜ್ಯಪಾಲ ವೆಂಕಟೇಶ್ ಹೆಬ್ಬಾರ್ , ಸಂಪುಟ ಕಾರ್ಯದರ್ಶಿ ಎಚ್ ಆರ್ ಚಂದ್ರೇಗೌಡ , ಕೋಶಾಧಿಕಾರಿ ಬಾಲಕೃಷ್ಣ ಹೆಗಡೆ , ಜಿಲ್ಲಾ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ವಿಟ್ಲ, ಹೆಚ್ಚುವರಿ ಕಾರ್ಯದರ್ಶಿ ಚಂದ್ರಹಾಸ್ ರೈ, ಗವರ್ನರ್ ಸಂಯೋಜಕಿ ಜ್ಯೋತಿ ಎಸ್ ಶೆಟ್ಟಿ, ಕ್ಯಾಬಿನೆಟ್ ಸಂಯೋಜಕಿ ನಾನ್ಸಿ ಮಸ್ಕರೇನಸ್ , LCIf ಕೋಆರ್ಡಿನೇಟರ್ ಲೋಕೇಶ್ ಶೆಟ್ಟಿ, LCIF ಗ್ರಾಂಟೆ ಕೋ ಆರ್ಡಿನೇಟರ್ ಅನಿಲ್ ಕುಮಾರ್ , ಮಾಜಿ ಗವರ್ನರ್ ಗಳಾದ ಕಿಶೋರ್ ಕುಮಾರ್, ಕೆಸಿ ಪ್ರಭು, ಡಾಕ್ಟರ್ ಗೀತಾ ಪ್ರಕಾಶ್ ಹಾಗೂ ಕುಂಬಳೆ ನರಸಿಂಹ ಪ್ರಭು, ಜಿಲ್ಲೆಯ ಲಯನ್ಸ್ ನಾಯಕರುಗಳು ಸದಸ್ಯರುಗಳು ಉಪಸ್ಥಿತರಿದ್ದರು, ಕಾರ್ಯಕ್ರಮವನ್ನು ಜಿ ಎಸ್ ಟಿ ಸಂಯೋಜಕ ರಮಾನಂದ ನುಜಿಪ್ಪಾಡಿ ನಿರ್ವಹಿಸಿದರು.

- Advertisement -

Related news

error: Content is protected !!