Friday, July 11, 2025
spot_imgspot_img
spot_imgspot_img

ಕಲ್ಲಡ್ಕ: ಕುದ್ರೆಬೆಟ್ಟು ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ತರಬೇತಿ ಕಾರ್ಯಕ್ರಮ

- Advertisement -
- Advertisement -
vtv vitla

ಕಲ್ಲಡ್ಕ : ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಕುದ್ರೆಬೆಟ್ಟು ಕಲ್ಲಡ್ಕ ಇಲ್ಲಿ ಶಾಲಾಭಿವೃದ್ಧಿ ಸಮಿತಿ ಹಾಗೂ ಪೋಷಕರ ತರಬೇತಿ ಕಾರ್ಯಕ್ರಮವು ನಡೆಯಿತು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ನಡುಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಂದೇಶ್ ಕುಮಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲಾಭಿವೃದ್ಧಿ ಸಮಿತಿಯ ರಚನೆ ಪಾತ್ರ, ಶಾಲೆಯ ಅಭಿವೃದ್ಧಿಯಲ್ಲಿ ಎಸ್.ಡಿ.ಎಂ.ಸಿ ಹಾಗೂ ಪೋಷಕರ ಪಾತ್ರ, ಶಾಲೆಯ ಶಿಕ್ಷಕರು ಪೋಷಕರ ಮಧ್ಯೆ ಎಸ್.ಡಿ.ಎಂ.ಸಿ ಯ ಸಾಮರಸ್ಯ, ಶಾಲೆ ಅಭಿವೃದ್ಧಿ ಪಥದತ್ತ ಯಾವ ರೀತಿ ಕೊಂಡೊಯ್ಯಬಹುದು ಹಾಗೂ ಹೊಸ ಶಿಕ್ಷಣ ನೀತಿಯ ಕುರಿತಾಗಿ ಸವಿವರವಾದ ಮಾಹಿತಿಯನ್ನು ನೀಡಿದರು.


ಬಾಳ್ತಿಲ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಸತೀಶ್ ರಾವ್ ಇವರು ಓದು ಕರ್ನಾಟಕ ಹಾಗೂ ಶಾಲಾ ಚಟುವಟಿಕೆಯ ಬಗ್ಗೆ, ಶಾಲೆ ಇನ್ನಷ್ಟು ಅಭಿವೃದ್ಧಿ ಪಥದಲ್ಲಿ ಹೇಗೆ ಕೊಂಡೊಯ್ಯಬಹುದು ಎಂಬುದಾಗಿ ಸವಿವರವಾಗಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ವಿಠ್ಠಲ ನಾಯಕ್ ,ಗ್ರಾಮ ಪಂಚಾಯತ್ ಸದಸ್ಯರಾದ ಶೋಭಾ, ಶಾಲಾ ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶ್ಯಾಮಲಾ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಯ ಎಲ್ಲಾ ಸದಸ್ಯರು ಹಾಗೂ ಪೋಷಕರು ಭಾಗವಹಿಸಿದ್ದರು.

ಪೋಷಕರಿಗೆ ಪ್ರಶ್ನೆಗಳನ್ನು ಕೇಳಿ ಸರಿಯಾದ ಉತ್ತರ ನೀಡಿದವರಿಗೆ ಬಹುಮಾನ ನೀಡಲಾಯಿತು. ಮುಖ್ಯಶಿಕ್ಷಕಿ ಚೇತನಕುಮಾರಿ ಪಿ.ವಿ ಸ್ವಾಗತಿಸಿ, ಶಿಕ್ಷಕಿ ಮಮತಾ ಶೆಟ್ಟಿ ವಂದಿಸಿದರು. ಗೌರವ ಶಿಕ್ಷಕಿ ರೇಖಾ ನಿರೂಪಿಸಿದರು. ಗೌರವ ಶಿಕ್ಷಕಿಯರಾದ ಸುಮಿತ್ರಾ , ಬಬಿತಾ, ಅಂಗನವಾಡಿ ಕಾರ್ಯಕರ್ತೆ ಸುರೇಖಾ ಸಹಕರಿಸಿದರು.

suvarna gold

- Advertisement -

Related news

error: Content is protected !!