Thursday, May 2, 2024
spot_imgspot_img
spot_imgspot_img

ಕಳ್ಳನೆಂದು ಭಾವಿಸಿ ಬ್ಯಾಂಕ್ ಉದ್ಯೋಗಿಯನ್ನು ಹತ್ಯೆಗೈದ ಸೆಕ್ಯೂರಿಟಿ ಗಾರ್ಡ್

- Advertisement -G L Acharya panikkar
- Advertisement -

ಸೆಕ್ಯೂರಿಟಿ ಗಾರ್ಡ್ ಒಬ್ಬ ವ್ಯಕ್ತಿಯೊಬ್ಬರನ್ನು ಹತ್ಯೆಗೈದ ಘಟನೆ ಬೆಂಗಳೂರಿನ ಹೆಚ್ ಎ ಎಲ್ ನಲ್ಲಿ ನಡೆದಿದೆ. ಮಾರತ್ ಹಳ್ಳಿ ಬಳಿಯ ವಂಶಿ ಸಿಟಾಡೆಲ್ ಅಪಾರ್ಟ್ ಮೆಂಟ್ ಗೆ ಅಪರಿಚಿತ ವ್ಯಕ್ತಿಯೊಬ್ಬ ಬಂದಿದ್ದ.

ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಬಂದ ವ್ಯಕ್ತಿಯನ್ನು ಕಂಡು ಸೆಕ್ಯೂರಿಟಿ ಗಾರ್ಡ್ ಶ್ಯಾಮನಾಥ್ ಆತನನ್ನು ಪ್ರಶ್ನೆ ಮಾಡಿದ್ದಾರೆ. ಎಷ್ಟೇ ಕೇಳಿದರೂ ವ್ಯಕ್ತಿ ಬಾಯಿಬಿಡದೇ ಸುಮ್ಮನಾಗಿದ್ದನ್ನು ಕಂಡು ಕಳ್ಳನೇ ಇರಬೇಕೆಂದ ಭಾವಿಸಿ ರಾಡ್ ನಿಂದ ಹೊಡೆದಿದ್ದಾನೆ. ಆತ ಅಲ್ಲೇ ಕುಸಿದು ಸಾವನ್ನಪ್ಪಿದ್ದಾನೆ.

ಛತ್ತೀಸಘಡ ಮೂಲದ ಬ್ಯಾಂಕ್ ಉದ್ಯೋಗಿ ಟ್ರೈನಿಂಗ್ ಸಲುವಾಗಿ ಬೆಂಗಳೂರಿಗೆ ಬಂದಿದ್ದ. ಜು. 05 ರಂದು ರಾತ್ರಿ ಸ್ನೇಹಿತರ ಪಾರ್ಟಿ ಮಾಡಿದ್ದ. ಆ ಬಳಿಕ ಒಬ್ಬನೇ ನಡೆದುಕೊಂಡು ಸ್ನೇಹಿತನ ಮನೆಗೆ ತೆರಳಿದ್ದ. ಮೊಬೈಲ್‌ನಲ್ಲಿ ಅಡ್ರೆಸ್ ಕೇಳುತ್ತಾ ಹೋಗಿದ್ದ. ಇದ್ದಕ್ಕಿದ್ದಂತೆ ಮೊಬೈಲ್ ಸ್ವಿಚ್‌ ಆಫ್ ಆಗಿ ಗೊಂದಲ ಶುರುವಾಗಿತ್ತು. ದಾರಿ ತಪ್ಪಿ ಬೇರೆಯದ್ದೇ ಅಪಾರ್ಟ್ ಮೆಂಟ್‌ಗೆ ಹೋಗಿದ್ದ. ಅಪರಿಚಿತ ವ್ಯಕ್ತಿ ಮನೆಯೊಳಗೆ ನುಗ್ಗಲು ಯತ್ನಿಸಿದ್ದ.

ಆತ ಕಳ್ಳನೇ ಇರಬೇಕು ಎಂದು ಭಾವಿಸಿ ಪಕ್ಕದಲ್ಲಿಯೇ ಇದ್ದ ರಾಡ್ ನಿಂದ ಸೆಕ್ಯೂರಿಟಿ ಗಾರ್ಡ್ ವ್ಯಕ್ತಿಯ ತಲೆಗೆ ಬಲವಾಗಿ ಹೊಡೆದಿದ್ದಾರೆ. ತಲೆಗೆ ಗಂಭೀರವಾಗಿ ಗಾಯವಾದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಸಂಬಂಧ ಎಚ್‌ಎಎಲ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ತಲೆ ಮರೆಸಿಕೊಂಡಿದ್ದ ಶ್ಯಾಮನಾಥ್ ಎಂಬಾತನನ್ನು ಎಚ್‌ಎಎಲ್ ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!