Wednesday, May 8, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿಸ್‌ ಆಂಗ್ಲ ಮಾಧ್ಯಮ ಶಾಲೆಯ ಪ್ರಿ-ನರ್ಸರಿ ಕಟ್ಟಡ ’ಜೇಸೀ ಕುಟೀರ’ ಲೋಕಾರ್ಪಣೆ

- Advertisement -G L Acharya panikkar
- Advertisement -

ವಿಟ್ಲ: ಸುಂದರ ನೈಸರ್ಗಿಕತೆಯ ಮಧ್ಯದಲ್ಲಿ ಗುರುಕುಲ ಕುಟೀರ ಮಾದರಿಯ ಕಟ್ಟಡ, ಸುಮಾರು 3000 sq.mtr ವಿಸ್ತೀರ್ಣ ಹೊಂದಿದ ವಿಶಾಲ ಹಾಲ್ ನಲ್ಲಿ ಮಗುವಿಗೆ ಸಂತಸ ಕೊಡುವ ಪ್ಲೇ ಸ್ಟೇಷನ್ ಮುಂತಾದ ಒಳಾಂಗಣ ಆಟದ ಸಾಮಗ್ರಿಗಳು, ಪುಷ್ಟಿದಾಯಕ ಆಹಾರ, ಶುದ್ಧ ನೀರು ಒದಗಿಸಲು ಬೇಕಾದ ಆಧುನಿಕ ಅಡುಗೆಕೋಣೆ, ಪುಟಾಣಿಗಳ ವಿಶ್ರಾಂತಿ ಕೊಠಡಿ, ಕಟ್ಟಡದೊಳಗೆ ಸ್ವಾಭಾವಿಕ ಗಾಳಿಯಾಡುವಂತೆ ಮೇಲಣ ಕಿಂಡಿ, ವಿಶಾಲ ಕಿಟಿಕಿ ಹಾಗೂ ಸರ್ವ ಕಾಲಕ್ಕೂ ತಂಪನ್ನೀಯುವ ಡಬಲ್ ಟೈಲ್ಡ್ ಚಾವಣಿ ಹೊಂದಿರುವ ಜೇಸಿಸ್‌ ಕುಟೀರ ಇಂದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಂಡಿದೆ.

ವಿಟ್ಲ ಬಸವನ ಗುಡಿಯಲ್ಲಿರುವ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆ ನಿರ್ಮಿಸಿದ ಕೆಜಿ ಪೂರ್ವ ಶಿಕ್ಷಣ ವ್ಯವಸ್ಥೆಯ ಪೂರ್ವ ನರ್ಸರಿ ವಿಭಾಗ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು. ಸುಮಾರು 75 ಪುಟಾಣಿ ಕಂದಮ್ಮಗಳಿಗೆ ಆಸರೆ ನೀಡುವ ಸಾಮರ್ಥ್ಯ ಹೊಂದಿರುವ ಸರ್ವಅನುಕೂಲಿತ ಕಟ್ಟಡ ‘ಜೇಸಿಕುಟೀರ’ ಕಾರ್ಯಾಚರಿಸಲಿದೆ. ಸರಕಾರದ ಹೊಸ ಶಿಕ್ಷಣ ನೀತಿಯ ಸಿದ್ಧತೆಯಂತೆ ಮಕ್ಕಳ ಭವಿಷ್ಯದ ಅಡಿಗಲ್ಲಾಗಿ ರೂಪಿಸಲಾಗಿದೆ.

ಪುಟಾಣಿಗಳ ನಲಿ-ಕಲಿಕೆಗೆ ಬೇಕಾದ ಆಕರ್ಷಕ ಚಿತ್ರಪಟಗಳನ್ನು ಅಳವಡಿಸಲಾಗಿದೆ. ಮಗುವಿನ ಮೆದುಳಿನ ಚುರುಕಿಗಾಗಿ ಆಕ್ವೇರಿಯಂ, ಹಕ್ಕಿಗಳ ಚಿಲಿಪಿಲಿಗಾಗಿ ಹಕ್ಕಿಗೂಡು ಹಾಗೂ ಇಂಡೋರ್ ಪ್ಲಾಂಟ್ ಗಳನ್ನು ಇರಿಸಲಾಗಿದೆ. ಹೊರಭಾಗದಲ್ಲಿ ಪುರಾತನ ಶೈಲಿಯ ಕಂಬಗಳ ವಿಶಾಲ ಜಗಲಿ, ಪ್ರತ್ಯೇಕ ಕಚೇರಿ, ಪಾರ್ಕಿಂಗ್ ವ್ಯವಸ್ಥೆ, ಹೋರಾಂಗಣ ಆಧುನಿಕ ಆಟದ ಮೈದಾನ, ಉದ್ಯಾನ ಹೊಂದಿದೆ. ಮಕ್ಕಳಿಗೆ ನೀರಿನ ಆಟದ ವ್ಯವಸ್ಥೆಯನ್ನು ಅಳವಡಿಸಿ ಬಾಲ ಮನಸ್ಸಿಗೆ ಸಂತಸ ಕೊಡಿಸುವ ಪ್ರಯತ್ನ ಮಾಡಲಾಗಿದೆ. ಇಂತಹ ಸುಸಜ್ಜಿತ ಕಟ್ಟಡವನ್ನು ಕೇವಲ 49 ದಿನಗಳಲ್ಲಿ ಪೂರ್ಣ ಕಾಮಗಾರಿಯನ್ನು ಮಾಡಿಕೊಟ್ಟ ಕೀರ್ತಿ ಇಂಜಿನಿಯರ್ ಲಯನ್ ಸಂತೋಷ್ ಕುಮಾರ್ ಶೆಟ್ಟಿ ಪೆಲತಡ್ಕ ಅವರಿಗೆ ಸಲ್ಲುತ್ತದೆ.

ಜೇಸಿಸ್ ಕುಟೀರ ಲೋಕಾರ್ಪಣಾ ಕಾರ್ಯಕ್ರಮದ ವೇಳೆ ಧಾರ್ಮಿಕ ವಿಧಿವಿಧಾನ, ಭಜನೆ ನಡೆಯಿತು. ಈ ವೇಳೆ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ವರ್ಗ, ಹಳೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾರ್ಥಿಗಳು ಸೇರಿದಂತೆ ಮೊದಲಾದವರು ಜೊತೆಗಿದ್ದರು.

- Advertisement -

Related news

error: Content is protected !!