Thursday, May 2, 2024
spot_imgspot_img
spot_imgspot_img

ಕಾಂಗ್ರೇಸ್‌ ಅಂತಿಮ ಪಟ್ಟಿ ಬಿಡುಗಡೆ; ಮಂಗಳೂರು ಉತ್ತರ ಕ್ಷೇತ್ರಕ್ಕೆ‌ ಕೊನೆಗೂ ಅಭ್ಯರ್ಥಿ ಘೋಷಣೆ..!!

- Advertisement -G L Acharya panikkar
- Advertisement -
vtv vitla

ಮಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಅಂತಿಮ ಪಟ್ಟಿ ಹಾಗೂ 6ನೇ ಪಟ್ಟಿಯನ್ನು ರಾತ್ರೋರಾತ್ರಿ ಸಭೆ ನಡೆಸಿ ಬಿಡುಗಡೆ ಮಾಡಿದೆ. ಕರಾವಳಿಯಲ್ಲಿ ಭಾರೀ ಕುತೂಹಲ ಮೂಡಿಸಿದ ಮಂಗಳೂರು ಉತ್ತರ ಕ್ಷೇತ್ರಕ್ಕೆ‌ ಕೊನೆಗೂ ಅಭ್ಯರ್ಥಿಯಾಗಿ ಉದ್ಯಮಿ ಇನಾಯತ್ ಆಲಿ ಆಯ್ಕೆಯಾಗಿದ್ದಾರೆ.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಹಾಗೂ ಮಾಜಿ ಶಾಸಕ ಮೊಯ್ದಿನ್ ಬಾವ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮೊಹಿಯುದ್ದೀನ್ ಬಾವ ಅವರು ಕಾಂಗ್ರೆಸ್ ವಿರುದ್ದ ಬಂಡಾಯದ ಸುಳಿವು‌ ನೀಡಿದ್ದಾರೆ. ಇನಾಯತ್ ಆಲಿ ಈಗಾಗಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಆದರೆ ಮಾಜಿ ಶಾಸಕ ಮೊಯಿದ್ದಿನ್ ಬಾವಾ ತಮ್ಮ ಪ್ರಭಾವ ಬಳಸಿ ಟಿಕೇಟ್ ಪಡೆಯಲು ಪ್ರಯತ್ನ ಪಟ್ಟಿದ್ದರು.

ಇಂದು ಬೆಳಗ್ಗೆ ಸರ್ವಧರ್ಮಗಳ ಪ್ರಾರ್ಥನೆ ಬಳಿಕ ಬೆಳಗ್ಗೆ 10 ಗಂಟೆಗೆ ಕಾವೂರು ಪೇಟೆಯಲ್ಲಿ ಬಹಿರಂಗ ಸಭೆ ನಡೆಯಲಿದೆ. ನಂತರ ಕಾವೂರು ಪೇಟೆಯಿಂದ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಜಾಥಾ ನಡೆಸಿ, ದೇವಸ್ಥಾನಕ್ಕೆ ಭೇಟಿ ನೀಡಿ ನಂತರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಈ ಪಟ್ಟಿಯಲ್ಲಿ ಒಟ್ಟು ಐವರು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದೆ.

ಮಂಗಳೂರು ಉತ್ತರ- ಇನಾಯತ್ ಅಲಿ
ಶಿಡ್ಲ ಘಟ್ಟ ಕ್ಷೇತ್ರ – ಬಿ.ವಿ ರಾಜೀವ್ ಗೌಡ
ಸಿ.ವಿ.ರಾಮನ್‌ನಗರ- ಎಸ್.ಆನಂದ್ ಕುಮಾರ್
ರಾಯಚೂರು ನಗರ-ಮಹಮ್ಮದ್ ಶಾಲಮ್
ಅರಕಲಗೂಡು-ಶ್ರೀಧರ್ ಗೌಡ

- Advertisement -

Related news

error: Content is protected !!