Sunday, June 14, 2026
spot_imgspot_img
spot_imgspot_img

ಕಾಪು: ಕಸಾಯಿಖಾನೆಗೆ ಪೊಲೀಸರಿಂದ ದಾಳಿ : ಓರ್ವನ‌ ಬಂಧನ..!!

- Advertisement -
- Advertisement -

ಕಾಪು : ಉಡುಪಿ ಜಿಲ್ಲೆಯ ಕಾಪು ಪೊಲೀಸ್‌ ಠಾಣಾ ವ್ಯಾಪ್ತಿಯ ಪಾದೂರು ಚಂದ್ರನಗರದ ಬಳಿ ದನ ಕಡಿದು ಮಾಂಸ ಮಾಡುತ್ತಿದ್ದ ವೇಳೆ ಕಸಾಯಿಖಾನೆಗೆ ಶಿರ್ವ ಪೊಲೀಸರು ದಾಳಿ ನಡೆಸಿ ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಮೂವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಿಳಿಯಲಾಗಿದೆ.

ಕಳತ್ತೂರು ಸೂರ್ಯನಗರ ನಿವಾಸಿ ಸಂಶುದ್ದೀನ್‌(53) ಬಂಧಿತ ಆರೋಪಿ. ಚಂದ್ರನಗರ ನಿವಾಸಿ ಅಬೂಬಕ್ಕರ್‌, ಕಳತ್ತೂರು ಪೈಯಾರು ನಿವಾಸಿ ನಜೀರ್‌ ಅವರ ಪುತ್ರ ಆಶೀರ್‌ ಮತ್ತು ಉಮರಬ್ಬನ ಪುತ್ರ ಅಶ್ರಫ್‌ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪಾದೂರು ಗ್ರಾಮದ ಚಂದ್ರನಗರದ ಬಳಿ ಖಾಲಿ ಜಾಗದಲ್ಲಿ ತಗಡು ಶೀಟು ಹಾಕಿ ಅಶ್ರಫ್‌ ಮತ್ತು ಆಶೀರ್‌ ಕದ್ದು ತಂದ ದನ ಕಡಿದು ಮಾಂಸ ಮಾಡಿ ಪ್ಲಾಸ್ಟಿಕ್‌ ಬಕೆಟ್‌ನಲ್ಲಿ ಇರಿಸಿದ್ದರು. ಸ್ಥಳಕ್ಕೆ ಶಿರ್ವ ಪಿಎಸ್‌ಐ ರಾಘವೇಂದ್ರ ಸಿ. ನೇತೃತ್ವದ ತಂಡ ದಾಳಿ ನಡೆಸಿ ದನದ ಮಾಂಸ, ಆರು ಕತ್ತಿ, ತೂಕದ ಎಲೆಕ್ಟ್ರಾನಿಕ್‌ ಯಂತ್ರ ಮತ್ತಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!