Tuesday, May 14, 2024
spot_imgspot_img
spot_imgspot_img

ಕಾಪು: ಟ್ಯಾಂಕರ್’ನಿಂದ ಕಾರ್ಬನ್ ಡಯಾಕ್ಸೈಡ್ ಸೋರಿಕೆ, ಗಾಬರಿಗೊಂಡ ಜನ.!

- Advertisement -G L Acharya panikkar
- Advertisement -

ಕಾಪು: ರಾಷ್ಟ್ರೀಯ ಹೆದ್ದಾರಿ 66 ರ ಉಳಿಯಾರಗೊಳಿ ದಂಡತೀರ್ಥ ಬಳಿ ಟ್ಯಾಂಕರ್ ವೊಂದರಿಂದ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ ಸೋರಿಕೆಯಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

ಮಂಗಳೂರು ಕಡೆಗೆ ತೆರಳುತ್ತಿರುವ ಟ್ಯಾಂಕರ್ ನ ಹೊರ ಭಾಗದಲ್ಲಿ ಲಿಕ್ವಿಡ್ ಸೋರಿಕೆಯಾಗುತ್ತಿದ್ದು, ಸುತ್ತಲೂ ಹೊಗೆ ಆವರಿಸಿಕೊಂಡಿದೆ.ರಾಷ್ಟ್ರೀಯ ಹೆದ್ದಾರಿಯಲ್ಲಿ ಏಕಾಏಕಿ ಹೊಗೆಯಂತೆ ಕಾಣಿಸಿಕೊಂಡ ಲಿಕ್ವಿಡ್ ನಿಂದ ಪ್ರಯಾಣಿಕರು ಗಾಬರಿಗೊಂಡಿದ್ದರು. ಉಡುಪಿಯಿಂದ ಮಂಗಳೂರು ಕಡೆಗೆ ಲಿಕ್ವಿಡ್ ಕಾರ್ಬನ್ ಡಯಾಕ್ಸೈಡ್ ಗ್ಯಾಸ್‌ ಹೊತ್ತೊಯ್ಯುತ್ತಿದ್ದ ಟ್ಯಾಂಕರ್, ಸೇಪ್ಟಿ ಪಿನ್ ತೆರೆದುಕೊಂಡಾಗ ಈ ಅವಾಂತರ ನಡೆಯಿತು.

ಗ್ಯಾಸ್ ಸೋರಿಕೆ ಆಗಿದೆ ಎಂದು ಪ್ರಯಾಣಿಕರು ಹಾಗೂ ವಾಹನ ಚಾಲಕರು ಗಾಬರಿಗೊಂಡಿದ್ದು, ಕೆಲ ಹೊತ್ತು ಹೆದ್ದಾರಿಯಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳ ಅಪಾಯ ಆಗದಂತೆ ತಡೆಯುವಲ್ಲಿ ಯಶಸ್ವಿಯಾದರು. ಅದೃಷ್ಟವಷಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಕೂಡಲೇ ಸ್ಥಳಕ್ಕೆ ಕಾಪು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪರಿಶೀಲನೆ ಮುಗಿಯುವವರೆಗೆ ಏಕಪಥವಾಗಿ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟರು.

- Advertisement -

Related news

error: Content is protected !!