Friday, June 5, 2026
spot_imgspot_img
spot_imgspot_img

ಸುಳ್ಯ: ಆಟೋರಿಕ್ಷಾ ಮತ್ತು ಆಂಬ್ಯುಲೆನ್ಸ್ ನಡುವೆ ಡಿಕ್ಕಿ – ಆಟೋ ಚಾಲಕ ಗಂಭೀರ !

- Advertisement -
- Advertisement -

ಸುಳ್ಯ: ಹಳೆಗೇಟು ಮೊಗರ್ಪಣೆ ಸಮೀಪ ಮಂಗಳೂರು ಮೂಲದ ಆಂಬ್ಯುಲೆನ್ಸ್ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿಯಾಗಿ ಆಟೋ ಚಾಲಕ ಜಲೀಲ್ ಎಂಬವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಮಂಗಳೂರು ಮೂಲದ ಗಣೇಶ್ ಹೆಸರಿನ ಆಂಬ್ಯುಲೆನ್ಸ್ ವಾಹನ ಮಂಗಳೂರಿನಿಂದ ರೋಗಿಯೊಬ್ಬನನ್ನು ಮಡಿಕೇರಿ ಕೊಂಡೊಯ್ದು ಹಿಂತಿರುಗುವ ವೇಳೆ ಹಳೆಗೇಟಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಆಟೋ ಮುಖಾಮುಖಿ ಡಿಕ್ಕಿಯಾಗಿದೆ.

ಡಿಕ್ಕಿಯ ರಭಸಕ್ಕೆ ಆಟೋ ಸಂಪೂರ್ಣ ಜಖಂಗೊಂಡಿದ್ದು ಚಾಲಕ ಜಲೀಲ್ ಎಂಬುವರು ತಲೆ ಮತ್ತು ಕೈಕಾಲುಗಳಿಗೆ ತೀವ್ರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕೊಂಡೊಯ್ಯಲಾಗಿದೆ ಎಂದು ತಿಳಿದುಬಂದಿದೆ. ಜಲೀಲ್ ಮೂಲತಃ ಹಳೆಗೇಟಿನವರಾಗಿದ್ದು ಪ್ರಸ್ತುತ ಕಾಂತಮಂಗಲ ದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

- Advertisement -

Related news

error: Content is protected !!