Saturday, July 25, 2026
spot_imgspot_img
spot_imgspot_img

ಕಾರು ಖರೀದಿಸಲು ಬಂದ ವ್ಯಕ್ತಿ ಟೆಸ್ಟ್ ಡ್ರೈವ್ ನೆಪದಲ್ಲಿ ಕಾರಿನೊಂದಿಗೆ ಪರಾರಿ

- Advertisement -
- Advertisement -
vtv vitla

ಬೆಂಗಳೂರು: ವ್ಯಕ್ತಿಯೋರ್ವ OLX ನಲ್ಲಿ ಜಾಹೀರಾತು ವೀಕ್ಷಿಸಿ ಕಾರು ಖರೀದಿಸಲು ಬಂದು ಮಾಲೀಕನಿಂದ ಟೆಸ್ಟ್ ಡ್ರೈವ್ ಎಂಬ ನೆವನ ಹೇಳಿ ಕಾರು ತೆಗೆದುಕೊಂಡು ಪರಾರಿಯಾಗಿರುವ ಘಟನೆ ಹೆಬ್ಬಾಳ-ಕೆಂಪಾಪುರದಲ್ಲಿ ನಡೆದಿದೆ. ಆರೋಪಿ ಬಾಗೇಪಲ್ಲಿ ಮೂಲದ ವೆಂಕಟೇಶ್ ಎಂದು ಗುರುತಿಸಲಾಗಿದೆ.

ರವೀಂದ್ರ ಎಂಬಾತ ಕೆಎ 04 ಎಂಆರ್ 9378 ನಂ ಬ್ರಿಜ್ಜಾ ಕಾರು ಮಾರಾಟಕ್ಕಿದೆ ಎಂದು OLXನಲ್ಲಿ ಜಾಹೀರಾತು ಹಾಕಿದ್ದರು. ಕಾರು ಬೇಕಿದೆ ಎಂದು ಕಾರು ಮಾಲಿಕ ರವೀಂದ್ರ ಅವರನ್ನು ವೆಂಕಟೇಶ್ ಸಂಪರ್ಕಿಸಿದ್ದನು. ಜನವರಿ 30 ರಂದು ಕಾರು ಖರೀದಿಗಾಗಿ ಆರೋಪಿ ಬಂದಿದ್ದು ಟೆಸ್ಟ್ ಡ್ರೈವ್ ಎಂದು ಹೇಳಿ ಕಾರು ಎಗರಿಸಿ ಪರಾರಿಯಾಗಿದ್ದನು. ಕಾರು ಕಳೆದುಕೊಂಡು ಕಂಗಾಲಾಗಿದ್ದ ಮಾಲೀಕನು, ಅಮೃತಹಳ್ಳಿ ಠಾಣೆಗೆ ಬಂದು ದೂರು ನೀಡಿದ್ದರು.

ತನ್ನ ಹೆಂಡತಿಯನ್ನು ಗ್ರಾಮ ಪಂಚಾಯಿತಿ ಎಲೆಕ್ಷನ್ ಗೆ ನಿಲ್ಲಿಸಿದ್ದನು. ಎಲೆಕ್ಷನ್ ಗಾಗಿ ಸಾಕಷ್ಟು ಹಣ ಖರ್ಚು ಮಾಡಿ ಮೈ ತುಂಬ ಸಾಲ ಮಾಡಿಕೊಂಡಿದ್ದ. ಹಾಗಾಗಿ ತನ್ನ ಬಳಿ ಇದ್ದ ಬ್ರಿಜ್ಜಾ ಕಾರು ಮಾರಾಟ ಮಾಡಿದ್ದನು. ಆದರೆ ದುರಾದೃಷ್ಟಕ್ಕೆ ವೆಂಕಟೇಶ್ ಹೆಂಡತಿ ಚುನಾವಣೆಯಲ್ಲಿ ಸೋತಿದ್ದಳು. ಕಾರು ಇಲ್ಲ ಅಂದರೆ ಊರಲ್ಲಿ ಅವಮಾನ ಎದುರಿಸುವ ಪ್ರಸಂಗ ಎದುರಾಗುತ್ತದೆ ಎಂಬ ಭಯದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಶಂಕಿಸಲಾಗಿದೆ. ಇದೀಗ ವೆಂಕಟೇಶ್ ಪೊಲೀಸರ ಅತಿಥಿಯಾಗಿದ್ದಾನೆ.

- Advertisement -

Related news

error: Content is protected !!