Tuesday, June 23, 2026
spot_imgspot_img
spot_imgspot_img

ಕಾರ್ಕಳ: ಅನಾರೋಗ್ಯ ಪೀಡಿತ ಮಗನಿಗೆ ವಿಷ ಕುಡಿಸಿ ತಂದೆ ಆತ್ಮಹತ್ಯೆ

- Advertisement -
- Advertisement -

ಕಾರ್ಕಳ: ಅಜೆಕಾರ್ ಠಾಣಾ ಸರಹದ್ದಿನ ಕೇರ್ವಾಶೆ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ಅನಾರೋಗ್ಯ ಪೀಡಿತ ಮಗನಿಗೆ ವಿಷ ಕುಡಿಸಿ ತಂದೆಯೊಬ್ಬರು ನೇಣುಬಿಗಿದು ಆತ್ಮಹತ್ಯೆ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಕೃಷ್ಣ ಪೂಜಾರಿ (56) ಅವರು ತನ್ನ ಮಗ ದೀಪೇಶ್ (26) ಎಂಬವನಿಗೆ ಮೈಲುತುತ್ತು ವಿಷ ಕುಡಿಸಿ ಮನೆ ಎದುರಿನ ಬಾವಿಗೆ ಹಾಕಿ ಕೊಲೆಮಾಡಿದ್ದು, ಕೃತ್ಯ ಎಸಗಿದ ಬಳಿಕ ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೀಪೇಶ್ ವಿಕಲಚೇತನಾಗಿದ್ದು, ಅವರ ಆರೈಕೆಯನ್ನು ಕೃಷ್ಣ ಪೂಜಾರಿ ಹಾಗೂ ಅವರ ಪತ್ನಿ ನೋಡಿಕೊಳ್ಳುತ್ತಿದ್ದರು. ಈ ನಡುವೆ ಪತ್ನಿ ಪಾಶ್ಪರೋಗಕ್ಕೆ ತುತ್ತಾಗಿ ಮುಂಬಯಿಯಲ್ಲಿ ಸಂಬಂಧಿಕರ ಮನೆಯಲ್ಲಿ ಇದ್ದಾರೆಂಬ ಮಾಹಿತಿ ಲಭಿಸಿದೆ.

ಈ ಎಲ್ಲಾ ಬೆಳವಣಿಗೆಯಿಂದ ನೊಂದು ಕೃಷ್ಣ ಪೂಜಾರಿ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ.

ಇನ್ನು ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Related news

error: Content is protected !!