Friday, April 26, 2024
spot_imgspot_img
spot_imgspot_img

ಕಾರ್ಕಳ ಕೋಟೆಯಲ್ಲಿ 300ಕ್ಕೂ ಹೆಚ್ಚು ಫಿರಂಗಿ ಗುಂಡುಗಳು ಪತ್ತೆ!

- Advertisement -G L Acharya panikkar
- Advertisement -

ಕಾರ್ಕಳ: ಇಕ್ಕೇರಿ ನಾಯಕ ಕಾಲಘಟ್ಟದಲ್ಲಿ ನಿರ್ಮಾಣಗೊಂಡಿದ್ದ ಕಾರ್ಕಳ ಕೋಟೆಯಲ್ಲಿ 300ಕ್ಕೂ ಅಧಿಕ ಫಿರಂಗಿ ಗುಂಡುಗಳು ಪತ್ತೆಯಾಗಿವೆ. ಇಕ್ಕೇರಿ ನಾಯಕನ ಅಧಿಕಾರದ ಬಳಿಕ ಕಾರ್ಕಳ ಕೋಟೆ ಟಿಪ್ಪುವಿನ ಪಾಲಾಗಿತ್ತು. ಆ ಕಾಲಾವಧಿಯಲ್ಲಿ ಫಿರಂಗಿಗಾಗಿ ಬಳಸುತ್ತಿದ್ದ ಬೆಣಚ್ಚು ಕಲ್ಲಿನಿಂದ ಸಿದ್ಧಪಡಿಸಲಾಗಿದ್ದ ವಿವಿಧ ಗಾತ್ರಗಳ ಗುಂಡು ಅದಾಗಿವೆ.

ಟಿಪ್ಪುವಿನ ಅಧಿಕಾರವಧಿಯ ಬಳಿಕ ಬ್ರಿಟಿಷರ ಪಾಲಾಗಿದ್ದ ಇದೇ ಕೋಟೆಯಲ್ಲಿ ಟಿಪ್ಪು ಪರವಾಗಿ ಅಧಿಕಾರ ಹೊಂದಿದ್ದ ಕುಟುಂಬವೊಂದು ಇದೇ ಕೋಟೆಯ ಪರಿಧಿಯಲ್ಲಿ ವಾಸಮಾಡಿಕೊಂಡಿತ್ತಲ್ಲದೇ ಭೂಮಿಯ ಅಧಿಕಾರ ಹೊಂದಿತ್ತೆನ್ನಲಾಗಿದೆ.

ಇತ್ತೀಚೆಗೆ ಕಾರ್ಕಳ ಕೋಟೆಯನ್ನು ಕೆಲವು ಉದ್ಯಮಿಗಳು ಖರೀದಿಸಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿ ಅಲ್ಲಿಯ ಭೂಮಿಯನ್ನು ಅಗೆಯುವ ಕಾಮಗಾರಿಯಲ್ಲಿ ತೊಡಗಿದ್ದಾಗ ಭೂಮಿಯ ಸುಮಾರು ಐದಡಿ ಆಳ ಫಿರಂಗಿ ಗುಂಡುಗಳು ಪತ್ತೆಯಾಗಿವೆ.

ಸ್ಥಳಕ್ಕೆ ತಹಶೀಲ್ದಾರ್ ಭೇಟಿ
ಮಾಹಿತಿ ಬೆಳಕಿಗೆ ಬರುತ್ತಿದ್ದಂತೆ ಕಾರ್ಕಳ ತಾಲೂಕು ಪ್ರಭಾರ ತಹಶೀಲ್ದಾರ್ ಪುರಂದರ ಹೆಗ್ಡೆ ಘಟನಾ ಸ್ಥಳಕ್ಕೆ ಆಗಮಿಸಿ ಸಂಪೂರ್ಣ ಮಾಹಿತಿ ಕಲೆ ಹಾಕಿದ್ದಾರೆ. ವಿವಿಧ ಗಾತ್ರದ ಸುಮಾರು 300ಕ್ಕೂ ಮಿಕ್ಕಿ ಗುಂಡುಗಳನ್ನು ಸಂಗ್ರಹಿಸಿ ಅವುಗಳನ್ನು ಕಾರ್ಕಳ ಪೊಲೀಸರ ವಶಕ್ಕೆ ನೀಡಿದ್ದಾರೆ. ಸಣ್ಣ ಗಾತ್ರದ ಗುಂಡು ಸುಮಾರು ಅರ್ಧ ಕೆಜಿಯಷ್ಟಿದರೆ, ದೊಡ್ಡ ಗಾತ್ರದ ಗುಂಡು 1 ಕೆಜಿ ಭಾರ ಹೊಂದಿದೆ ಎಂದು ಕಂದಾಯ ಮೂಲಗಳಿಂದ ತಿಳಿದು ಬಂದಿದೆ.

ಕಂದಾಯ ನಿರೀಕ್ಷಕ ಗುರುಪ್ರಸಾದ್, ಗ್ರಾಮ ಕರಣಿಕ ಪ್ರವೀಣ್, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಪ್ರವೀಣ್ ಗೋಕುಲ್ ಮತ್ತಿತರರು ಈ ವೇಳೆ ಹಾಜರಿದ್ದರು.

ಕಾರ್ಕಳ ಕೋಟೆಯಲ್ಲಿತ್ತು ವೀರಮಾರುತಿ ಗುಡಿ..!
ಕಾರ್ಕಳದ ಕೊಟೆಯಲ್ಲಿ ವೀರಮಾರುತಿಯ ಗುಡಿಯೊಂದಿತ್ತು. ಇಕ್ಕೇರಿ ರಾಜನ ಆಳ್ವಿಕೆಯ ಕಾಲಘಟ್ಟದಲ್ಲಿ ಕೋಟೆಯ ರಕ್ಷಣೆ ಮಾಡುತ್ತಿದ್ದ ರಾಮಕ್ಷತ್ರಿಯ ಸಮುದಾಯದವರು ವೀರಮಾರುತಿಯನ್ನು ಆರಾಧಿಸುತ್ತಿದ್ದರು. ಟಿಪ್ಪುವಿನ ಕಾಲಘಟ್ಟದಲ್ಲಿ ಧರಾಶಾಹಿಯಾಗಿದ್ದ ವೀರಮಾರುತಿಯ ಏಕಶಿಲಾ ಮೂರ್ತಿಯನ್ನು ಪಕ್ಕದ ಮಾರಿಯಮ್ಮ ಕ್ಷೇತ್ರದ ಒಂದು ಭಾಗದಲ್ಲಿ ಪ್ರತಿಷ್ಠಾಪನೆಗೈದು ಆರಾಧಿಸುತ್ತಾ ಬಂದಿದ್ದರು. ಇತ್ತೀಚೆಗಷ್ಟೇ ಮಾರಿಯಮ್ಮ ಕ್ಷೇತ್ರ ಪುನರ್‍ ನಿರ್ಮಾಣ ಕಾರ್ಯ ನಡೆಯುವ ಸಂದರ್ಭದಲ್ಲಿ ವೀರಮಾರುತಿ ಗುಡಿಯ ಪುನರ್ ನಿರ್ಮಾಣ ಕಾರ್ಯವು ಭರದಿಂದ ಸಾಗುತ್ತಿದೆ.

- Advertisement -

Related news

error: Content is protected !!