Monday, May 6, 2024
spot_imgspot_img
spot_imgspot_img

ಕಾರ್ಕಳ: ನಿಂತಿದ್ದ ಕಾರಿಗೆ ಬಸ್ಸು ಡಿಕ್ಕಿಯಾಗಿ ಓರ್ವ ಸಾವು; ಸ್ಮಶಾನದ ಬಳಿ ನಡೆದ ಅವಘಡ

- Advertisement -G L Acharya panikkar
- Advertisement -

ಕಾರ್ಕಳ: ಕಾರು ಬಳಿ ನಿಂತಿದ್ದ ಇಬ್ಬರಿಗೆ ಬಸ್ಸು ಡಿಕ್ಕಿಯಾದ ಪರಿಣಾಮ ಓರ್ವ ಸಾವನ್ನಪ್ಪಿದ ಘಟನೆ ಪುಲ್ಕೇರಿ-ಬಜಗೋಳಿ ರಾಷ್ಟ್ರೀಯ ಹೆದ್ದಾರಿಯ ಕರಿಯಕಲ್ಲು ಸ್ಮಶಾನ ಮುಂಭಾಗದಲ್ಲಿ ನಡೆದಿದೆ. ಕಾರಿನ ಸೈಲೆನ್ಸರ್‌ನಲ್ಲಿ ಕಾಣಿಸಿಕೊಂಡ ಹೊಗೆಯ ಕಾಣಿಸಿಕೊಂಡಿದೆ. ಇದನ್ನು ಪರಿಶೀಲಿಸಲು ಇಳಿದ ಇಬ್ಬರು ಕಾರಿನ ಪಕ್ಕದಲ್ಲಿ ನಿಂತಿದ್ದಾರೆ. ಈ ವೇಳೆ ಪುಲ್ಕೇರಿ ಕಡೆಯಿಂದ ಅತೀ ವೇಗವಾಗಿ ಬಂದ ಬಸ್ಸು ಇಬ್ಬರಿಗೆ ಡಿಕ್ಕಿಯಾಗಿದೆ.

ಗಿರೀಶ್ ಛಲವಾದಿ (39) ಮೃತಪಟ್ಟ ವ್ಯಕ್ತಿ. ಬಾವಿ ತೋಡುವ ಕೆಲಸ ನಿರ್ವಹಿಸುತ್ತಿದ್ದ ಅವರು ಟಾಟಾ ಇಂಡಿಗೋ ಕಾರಿನಲ್ಲಿ ದುರ್ಗಪ್ಪ, ಕೃಷ್ಣ, ಬಸಪ್ಪ ಎಂಬವರೊಂದಿಗೆ ಜೋಡುರಸ್ತೆಯಿಂದ ಬಜಗೋಳಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ಕಾರಿನ ಸೈಲೆನ್ಸರ್‌ನಿಂದ ದಟ್ಟ ಹೊಗೆ ಹೊರ ಉಗುಳುತ್ತಿತ್ತು. ಇದರಿಂದ ಗಾಬರಿಗೊಂಡು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ ಚಾಲಕ ಗಿರೀಶ್ ಹಾಗೂ ಕೃಷ್ಣ ಎಂಬವರು ಕಾರಿನಿಂದ ಹೊರಬಂದು ರಸ್ತೆಯ ಮೇಲೆ ನಿಂತುಕೊಂಡಿದ್ದರು.

ಅದೇ ವೇಳೆಗೆ ಕಾರ್ಕಳ ಪುಲ್ಕೇರಿ ಕಡೆಯಿಂದ ಅತೀ ವೇಗವಾಗಿ ಬಂದ ಬಸ್ಸು ರಸ್ತೆಯ ಬದಿ ನಿಂತುಕೊಂಡಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ಅತಘಾತದ ತೀವ್ರತೆಗೆ ಕಾರಿನ ಹೊರಭಾಗ ರಸ್ತೆಯಲ್ಲಿ ನಿಂತುಕೊಂಡಿದ್ದ ಗಿರೀಶ್, ಕೃಷ್ಣ ಎಂಬವರು ರಸ್ತೆಗೆ ಎಸೆಯಲ್ಪಟ್ಟು ತೀವ್ರ ಸ್ವರೂಪದಲ್ಲಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅದಾಗಲೇ ಗಿರೀಶ್ ಸಾವನೊಪ್ಪಿರುವ ಬಗ್ಗೆ ಅಲ್ಲಿನ ವೈದ್ಯರು ದೃಢ ಪಡಿಸಿದ್ದಾರೆ. ಕಾರು ಜಖಂ ಗೊಂಡಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಕೇಸುದಾಖಲಾಗಿದೆ.

- Advertisement -

Related news

error: Content is protected !!