Friday, August 7, 2026
spot_imgspot_img
spot_imgspot_img

ಕಾರ್ಕಳ: ವಿಪರೀತ ಮದ್ಯಪಾನದ ಚಟ; ಆಕಸ್ಮಿಕವಾಗಿ ಹೊಳೆಗೆ ಬಿದ್ದು ವ್ಯಕ್ತಿ ಸಾವು

- Advertisement -
- Advertisement -

ಕಾರ್ಕಳ: ವಿಪರೀತ ಮಧ್ಯಪಾನದ ಚಟ ಹೊಂದಿದ್ದ ವ್ಯಕ್ತಿಯೂಬ್ಬರ ಮೃತದೇಹವು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ಹಿಂಬದಿ ಇರುವ ನಾಗಬನದ ಹತ್ತಿರದ ಶಾಂಭವಿ ಹೊಳೆಯಲ್ಲಿ ಪತ್ತೆಯಾಗಿದ್ದು, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಮುಂಡ್ಕೂರು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಬಳಿಯ ನಿವಾಸಿ ರಮೇಶ್ ಸಪಳಿಗ (68) ಎಂಬಾತ ಸಾವನಪ್ಪಿದ ವ್ಯಕ್ತಿ.

ಮುಂಬೈಯಲ್ಲಿ ಹೋಟೆಲ್ ಉದ್ಯಮಿಯಾಗಿದ್ದ, ರಮೇಶ್ ಸಪಳಿಗ ಕೆಲವು ಸಮಯದ ಹಿಂದೆ ಸಹೋದರ ಅನಾರೋಗ್ಯ ಪೀಡಿತರಾದ ಹಿನ್ನಲೆ ಊರಿಗೆ ಬಂದವರು ಮದ್ಯಪಾನ ಮಾಡಲೆಂದು ಮನೆಯಿಂದ ಹೋದವರು ವಾಪಸ್ ಮನೆಗೆ ಬಂದಿರಲಿಲ್ಲ. ರಮೇಶ್ ಸಪಳಿಗ ಅವರ ಪುತ್ರ ಯೋಗಿಶ್ ಸಪಳಿಗರವರು ಪೊಲೀಸ್ ಠಾಣೆಯಲ್ಲಿ ದೂರಿನ ನೀಡಿದ್ದು, ಮಧ್ಯಪಾನ ಮಾಡಿ ಬರುವಾಗ ಆಕಸ್ಮಿಕವಾಗಿ ಹೊಳೆಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!