Saturday, April 27, 2024
spot_imgspot_img
spot_imgspot_img

ನೆರೆಮನೆಯ ಕೋಳಿ ಕೂಗುವುದರಿಂದ ನಿದ್ದೆ ಬರುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ಭೂಪ

- Advertisement -G L Acharya panikkar
- Advertisement -

ಬೆಂಗಳೂರು: ಪಕ್ಕದ ಮನೆಯವರ ಕೋಳಿ ಕೂಗುವುದರಿಂದ ರಾತ್ರಿ ಹೊತ್ತು ನಾವು ಸರಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ. ತುಂಬಾ ತೊಂದರೆಯಾಗುತ್ತಿದೆ ಎಂದು ನಗರ ಪೊಲೀಸರಿಗೆ ವ್ಯಕ್ತಿಯೊಬ್ಬ ದೂರು ನೀಡಿದ್ದಾನೆ.

ಜೆ.ಪಿ.ನಗರದ 8ನೇ ಹಂತದ ಮನೆಯೊಂದರಲ್ಲಿ ಕೋಳಿ ಹಾಗೂ ಬಾತುಕೋಳಿ ಸಾಕಾಣೆ ಮಾಡುತ್ತಿದ್ದು ಇದು ಸುತ್ತಲಿನ ಮನೆಮಂದಿಯ ನಿದ್ದೆಗೆ ಭಂಗ ತಂದಿದೆ. ಹೊತ್ತಲ್ಲದ ಹೊತ್ತಲ್ಲಿ ಕೋಳಿ ಕೂಗುತ್ತಿರುವುದರಿಂದ ನಿದ್ದೆಗೆ ಸಮಸ್ಯೆಯಾಗುತ್ತಿದೆ ಇದರಿಂದ ಪಾರು ಮಾಡುವಂತೆ ನೆಮೊ ಹೆಸರಿನ ವ್ಯಕ್ತಿ ಪೊಲೀಸರಲ್ಲಿ ಆಗ್ರಹಿಸಿದ್ದಾನೆ.

ಈ ಬಗ್ಗೆ ನಗರ ಪೊಲೀಸರಿಗೆ ಟ್ವೀಟ್ ಮಾಡಿರುವ ನಿವಾಸಿಯೊಬ್ಬ, ನಮ್ಮ ವಠಾರದ ಮನೆಯೊಂದರಲ್ಲಿ ಕೋಳಿ ಸಾಕಣೆ ಮಾಡುತ್ತಿದ್ದಾರೆ. ಇವುಗಳು ಮುಂಜಾನೆ ಮೂರು ಗಂಟೆಗೆಲ್ಲಾ ಜೋರಾಗಿ ಕೂಗುತ್ತಿವೆ. ಇದರಿಂದ ನಮ್ಮ ಎರಡು ವರ್ಷದ ಮಗ ನಿದ್ದೆಯಿಂದ ಎದ್ದು ಬಿಡುತ್ತಾನೆ. ಕೊನೆಗೆ ನಮಗೂ ನಿದ್ದೆ ಇಲ್ಲದಂತೆ ಆಗುತ್ತದೆ. ಈ ಬಗ್ಗೆ ಸೂಕ್ತ ಕ್ರಮ ವಹಿಸಿ ಎಂದ ಟ್ವೀಟ್ ಮೂಲಕ ಆಗ್ರಹಿಸಿದ್ದಾನೆ. ಟ್ವಿಟ್ಟರ್‌ ನಲ್ಲಿ ಪೊಲೀಸ್‌ ಕಮಿಷನರ್‌, ಡಿಸಿಪಿಗೆ ದೂರನ್ನು ಟ್ಯಾಗ್‌ ಮಾಡಿದ್ದಾನೆ.

- Advertisement -

Related news

error: Content is protected !!