Sunday, May 5, 2024
spot_imgspot_img
spot_imgspot_img

ಕಾರ್ಗಿಲ್​ನಲ್ಲಿ ಯೋಧರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ಪ್ರತಿ ವರ್ಷದ ಸಂಪ್ರದಾಯದಂತೆ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜೊತೆ ದೀಪಾವಳಿ ಹಬ್ಬವನ್ನು ಆಚರಿಸಿದ್ದಾರೆ.

ಕಾರ್ಗಿಲ್​ನ ಯೋಧರಿಗೆ ಸಿಹಿ ತಿನ್ನಿಸಿ, ಗಿಫ್ಟ್​ಗಳನ್ನು ನೀಡಿ ಅವರ ಜೊತೆ ಕೆಲ ಸಮಯ ಕಳೆದು ಈ ವರ್ಷದ ದೀಪಾವಳಿ ಆಚರಿಸಿದ್ದಾರೆ ಪ್ರಧಾನಿ ಮೋದಿ.

2014ರಲ್ಲಿ ಅಧಿಕಾರ ವಹಿಸಿಕೊಂಡಾಗಿನಿಂದ ಉತ್ತರಾಖಂಡ, ಹಿಮಾಚಲ ಪ್ರದೇಶ, ರಾಜಸ್ಥಾನ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶಗಳಂತಹ ರಾಜ್ಯಗಳಲ್ಲಿ ಸೈನಿಕರೊಂದಿಗೆ ಸಮಯ ಕಳೆಯುವ ಮೂಲಕ ಪ್ರಧಾನಿ ದೀಪಾವಳಿಯನ್ನು ಆಚರಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕಾರ್ಗಿಲ್‌ನಲ್ಲಿ ಮೇಜರ್ ಅಮಿತ್ ಅವರನ್ನು ಸಂಭ್ರಮಾಚರಣೆಯ ಸಂದರ್ಭದಲ್ಲಿ ಭೇಟಿಯಾದರು. ಮೇಜರ್ ಅಮಿತ್ ಈ ಹಿಂದೆ ನವೆಂಬರ್ 2001ರಲ್ಲಿ ಗುಜರಾತ್‌ನ ಬಲಾಚಾಡಿಯ ಸೈನಿಕ ಶಾಲೆಯಲ್ಲಿ ಓದುತ್ತಿದ್ದಾಗ ಮೋದಿಯವರನ್ನು ಭೇಟಿಯಾಗಿದ್ದರು. ಆ ಫೋಟೋವನ್ನು ಇಂದು ಮೇಜರ್ ಅಮಿತ್ ಪ್ರಧಾನಿ ಮೋದಿಯವರಿಗೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೈನಿಕರನ್ನು ತಮ್ಮ ಕುಟುಂಬ ಎಂದು ಕರೆದಿದ್ದಾರೆ. ಸೈನಿಕರಿಲ್ಲದೆ ನಮ್ಮ ದೇಶದ ಜನರು ನೆಮ್ಮದಿಯಿಂದ ದೀಪಾವಳಿಯನ್ನು ಆಚರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭಯೋತ್ಪಾದನೆ ವಿರುದ್ಧದ ಸೈನಿಕರ ಹೋರಾಟವನ್ನು ಶ್ಲಾಘಿಸಿದ ಅವರು, ಡ್ರಾಸ್, ಬಟಾಲಿಕ್ ಮತ್ತು ಟೈಗರ್ ಹಿಲ್ ಅವರ ಧೈರ್ಯಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಭಾರತಕ್ಕೆ ಈಗ ಜಾಗತಿಕವಾಗಿ ಗೌರವ ಸಿಗುತ್ತಿದೆ. ನೀವು ನಮ್ಮ ಗಡಿಗಳನ್ನು ರಕ್ಷಿಸುತ್ತಿರುವಾಗ ನಾವು ನಮ್ಮ ಶತ್ರುಗಳ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳುತ್ತಿದ್ದೇವೆ. ನಮಗೆ ಸವಾಲು ಎದುರಾದರೆ, ತಮ್ಮದೇ ಭಾಷೆಯಲ್ಲಿ ಶತ್ರುಗಳಿಗೆ ಹೇಗೆ ತಕ್ಕ ಪ್ರತ್ಯುತ್ತರ ನೀಡಬೇಕೆಂದು ನಮ್ಮ ಸಶಸ್ತ್ರ ಪಡೆಗಳಿಗೆ ತಿಳಿದಿದೆ ಎಂದು ಮೋದಿ ಹೇಳಿದ್ದಾರೆ.

ಸಶಸ್ತ್ರ ಪಡೆಗಳಲ್ಲಿ ಮಹಿಳಾ ಕೆಡೆಟ್‌ಗಳ ಸೇರ್ಪಡೆ ಕುರಿತು ಪ್ರಧಾನಮಂತ್ರಿ ಮೋದಿ, “ಭಾರತೀಯ ಸೇನೆಗೆ ನಮ್ಮ ಹೆಣ್ಣುಮಕ್ಕಳ ಆಗಮನದಿಂದ ನಮ್ಮ ಶಕ್ತಿ ಹೆಚ್ಚಲಿದೆ” ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಗಿಲ್‌ನಲ್ಲಿ ಸಶಸ್ತ್ರ ಪಡೆಗಳ ಸದಸ್ಯರೊಂದಿಗೆ ‘ವಂದೇ ಮಾತರಂ’ ಗಾಯನದಲ್ಲಿ ಭಾಗವಹಿಸಿದರು. ತಮ್ಮ ಭಾಷಣದಲ್ಲಿ ಅವರು ದೀಪಾವಳಿ ಎಂದರೆ “ಭಯೋತ್ಪಾದನೆಯ ಅಂತ್ಯದ ಹಬ್ಬ” ಎಂದು ಹೇಳಿದರು.

- Advertisement -

Related news

error: Content is protected !!