Friday, May 3, 2024
spot_imgspot_img
spot_imgspot_img

ಕಾಲೇಜಿನ ಟಾಪರ್ ವಿದ್ಯಾರ್ಥಿನಿ ಅಪಾರ್ಟ್ಮೆಂಟ್ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಶರಣು..!

- Advertisement -G L Acharya panikkar
- Advertisement -

ಬೆಂಗಳೂರು ನಗರದ ಚಾಲುಕ್ಯ ಸರ್ಕಲ್ ನಲ್ಲಿರುವ ಹೈ ಪಾಯಿಂಟ್ ಅಪಾರ್ಟ್ ನಲ್ಲಿ ಯುವತಿಯೊಬ್ಬಳು ಬಿಲ್ಡಿಂಗ್ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ .

ಪ್ರಕೃತಿ(18) ಮೃತ ಯುವತಿಯಾಗಿದ್ದು ಅಪಾರ್ಟ್ಮೆಂಟ್ ನ 10ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ಪ್ರಕೃತಿ ಸೋಫಿಯಾ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು, ಟಾಪರ್ ಆಗಿದ್ದಳು.

ಕೆಲ ದಿನಗಳಿಂದ ಖಿನ್ನತೆಗೊಳಗಾಗಿದ್ದ ಪ್ರಕೃತಿ ಈ ಹಿಂದೆಯೂ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ಮಾಹಿತಿ ಇದೆ. ಇದೇ ಕಾರಣಕ್ಕೆ ಪೋಷಕರು ವೈದ್ಯರ ಬಳಿ ಅನೇಕ ದಿನಗಳ ಕಾಲ ಪ್ರಕೃತಿಗೆ ಕೌನ್ಸಿಲಿಂಗ್ ಸಹ ಕೊಡಿಸಿದ್ದರಂತೆ. ಇಷ್ಟಾದ್ರು ಕಾಲೇಜಿನ ಪಕ್ಕದಲ್ಲಿರುವ ಅಪಾರ್ಟ್ಮೆಂಟ್ ಗೆ ಬಂದಿದ್ದ ಈಕೆ ನೇರವಾಗಿ ಮಹಡಿ ಮೇಲೆ ಹೋಗಲು ಯತ್ನಿಸಿದ್ದಾಳೆ .

ಈ ವೇಳೆ ಹತ್ತನೇ ಮಹಡಿಯಿಂದ ಟೆರಸ್ ಹೋಗುವ ಗೇಟ್ ಲಾಕ್ ಆಗಿತ್ತು. ಆದರೆ ಆತ್ಮಹತ್ಯೆಗೆ ನಿರ್ಧರಿಸಿ ಬಂದಿದ್ದ ಪ್ರಕೃತಿ ಹತ್ತನೇ ಮಹಡಿಯಿಂದ ಜಿಗಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾಳೆ . ಸದ್ಯ ಘಟನೆ ಹಿನ್ನೆಲೆ ಹೈಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

- Advertisement -

Related news

error: Content is protected !!