- Advertisement -
- Advertisement -


ಮಂಡ್ಯ: ಐಟಿಐ ಕಾಲೇಜು ಪ್ರಾಂಶುಪಾಲರಿಗೆ ಜೆಡಿಎಸ್ ಶಾಸಕ ಶ್ರೀನಿವಾಸ್ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆಯ ಐಟಿಐ ಕಾಲೇಜಿನ ಉನ್ನತೀಕರಿಸಿದ ಕಾಲೇಜು ಉದ್ಘಾಟನೆ ಕಾರ್ಯಕ್ರಮದ ವೇಳೆ ಕಾಲೇಜು ಪ್ರಾಂಶುಪಾಲ ನಾಗಾನಂದ್ ಅವರ ಕಪಾಳಕ್ಕೆ ಶಾಸಕ ಶ್ರೀನಿವಾಸ್ ಹೊಡೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರಾಂಶುಪಾಲರು ಕಾಲೇಜಿನ ವ್ಯವಸ್ಥೆ ಬಗ್ಗೆ ಸರಿಯಾಗಿ ಮಾಹಿತಿ ನೀಡಿಲ್ಲ ಹಾಗೂ ಕಾಲೇಜಿನಲ್ಲಿ ಮೂಲಭೂತ ಸೌಲಭ್ಯ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ಪ್ರಿನ್ಸಿಪಾಲ್ ಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಶಾಸಕರ ದರ್ಪ, ದುರಹಂಕಾರಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಕಾಲೇಜಿನ ಪ್ರಿನ್ಸಿಪಾಲ್ ನಾಗಾನಂದ್ ಮಾತನಾಡಿ ತಪ್ಪು ಮಾಡದೇ ಹೊಡೆಸಿಕೊಂಡೆ. ಯಾಕಾದ್ರೂ ಈ ಕೆಲಸಕ್ಕೆ ಸೇರಿಕೊಂಡೆ ಎಂದು ತನ್ನ ಅಳಲು ತೋಡಿಕೊಂಡಿದ್ದಾರೆ.
- ಮ್ಯಾಟ್ರಿಮೋನಿ ಆ್ಯಪ್ನಲ್ಲಿ ಪರಿಚಯ: ₹87.22 ಲಕ್ಷ ವಂಚನೆ; ಬೆಳ್ತಂಗಡಿಯಲ್ಲಿ ಪ್ರಕರಣ ದಾಖಲು
- ಪುತ್ತೂರು ತಾಲೂಕು ಇಂಟೆಕ್ ನೂತನ ಪದಾಧಿಕಾರಿಗಳ ನೇಮಕ: ಅಧ್ಯಕ್ಷರಾಗಿ ಅಜೀಮ್ ಬನ್ನೂರು
- ಅತ್ಯುತ್ತಮ ಸೇವೆಗೆ ಮಂಗಳೂರು ನಗರ ಪೊಲೀಸ್ ಸಿಬ್ಬಂದಿಗೆ ಗೌರವ: 29 ಅಧಿಕಾರಿಗಳು, 118 ಸಿಬ್ಬಂದಿಗೆ ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ
- ವಿವಾಹಿತೆ ಸಾವಿನ ಪ್ರಕರಣ: ಪತಿ ಮನೆಯ ಮೂವರ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲು
- ಮೊಬೈಲ್ ವಿಚಾರಕ್ಕೆ ಅಣ್ಣನಿಂದ ತಮ್ಮನ ಬರ್ಬರ ಹತ್ಯೆ: ಕೊಡಲಿಯಿಂದ ಕೊಂದು ಪರಾರಿಯಾಗಿದ್ದ ಆರೋಪಿ ಬಂಧನ

- Advertisement -








