Thursday, July 23, 2026
spot_imgspot_img
spot_imgspot_img

ಕಾಲೇಜು ವಿದ್ಯಾರ್ಥಿನಿಗೆ ಪ್ರಾದ್ಯಾಪಕನಿಂದ ಲೈಂಗಿಕ ಕಿರುಕುಳ..!

- Advertisement -
- Advertisement -

vtv vitla
vtv vitla

ಸಿದ್ದಾಪುರ: ವಿದ್ಯಾರ್ಥಿನಿಯೊಬ್ಬರು ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಕಾಲೇಜಿನ ಪ್ರಾಧ್ಯಾಪಕರೊಬ್ಬರ ವಿರುದ್ಧ ಶಂಕರನಾರಾಯಣ ಠಾಣೆಯಲ್ಲಿ ದೂರು ದಾಖಲಾಗಿದೆ. ಶಿಕ್ಷಕನನ್ನು ಅತಿಥಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ವಿಘ್ನೇಶ್‌ ಎನ್ನಲಾಗಿದೆ.

vtv vitla

ಶಂಕರನಾರಾಯಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಗೆ ಕಳೆದ ವರ್ಷ ಆನ್‌ಲೈನ್‌ ಕ್ಲಾಸ್‌ ನಡೆಯುವಾಗ ವಿಘ್ನೇಶ್‌ ಯುವತಿಯ ಮೊಬೈಲ್‌ಗೆ ಪಠ್ಯಕ್ಕೆ ಸಂಬಂಧಿಸಿ ಮೆಸೇಜ್‌ ಕಳುಹಿಸುತ್ತಿದ್ದರು. ಅನಂತರ ವ್ಯಾಟ್ಸ್‌ ಆಯಪ್‌ಗೆ ಅಸಭ್ಯ ಮೆಸೇಜ್‌ ಕಳುಹಿಸುತ್ತಿದ್ದರು. ಇದರ ವಿರುದ್ಧ ಎಚ್ಚರಿಕೆ ನೀಡಿದ ಬಳಿಕ ನಿಲ್ಲಿಸಿದ್ದರು.

ಆದರೆ ಇದೀಗ ಕಾಲೇಜಿನಲ್ಲಿರುವಾಗ ಹಿಂಬಾಲಿಸಿಕೊಂಡು ಬಂದು ಮದುವೆಯಾಗು, ಪ್ರೀತಿ ಮಾಡು ಎಂದು ಒತ್ತಾಯಿಸಿ ಮಾನಸಿಕ, ಲೈಂಗಿಕ ಹಿಂಸೆ ನೀಡುತ್ತಿದ್ದಾರೆ. ಮಾತ್ರವಲ್ಲದೆ ಬೆದರಿಕೆ ಹಾಕಿದ್ದಾರೆ ಎಂದು ವಿದ್ಯಾರ್ಥಿನಿ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

vtv vitla
- Advertisement -

Related news

error: Content is protected !!