Friday, June 5, 2026
spot_imgspot_img
spot_imgspot_img

ಕಾಸರಗೋಡು: ಉದ್ಯಮಿಯನ್ನು ಅಪಹರಿಸಿ ಕೋಟಿಗಟ್ಟಲೆ ದರೋಡೆ!! ಇಬ್ಬರ ಬಂಧನ

- Advertisement -
- Advertisement -

ಕಾಸರಗೋಡು: ಮೊಗ್ರಾಲ್ ಪತ್ತೂರಿನಲ್ಲಿ ಮಹಾರಾಷ್ಟ್ರದ ಉದ್ಯಮಿಯನ್ನು ಅಪಹರಿಸಿ ದರೋಡೆಗೈದ ಪ್ರಕರಣ ಸಂಬಂಧಿಸಿ ಮತ್ತಿಬ್ಬರನ್ನು ಪೋಲಿಸರು ಬಂಧಿಸಿದ್ದಾರೆ.

2021ರಲ್ಲಿ ಚಿನ್ನದ ವ್ಯಾಪಾರಿಯ ಕಾರು ತಡೆದು ನಿಲ್ಲಿಸಿ ಅವರನ್ನು ಬೇರೊಂದು ಕಾರಿಗೇರಿಸಿ 35 ಕೋಟಿ ರೂ ಅಪಹರಿಸಿ . ದರೋಡೆಗೈದ ಇಬ್ಬರು ಆರೋಪಿಗಳನ್ನು ವಯನಾಡು ಪೊಲೀಸರು ಕಾಪಾ ಕಾನೂನು ಪ್ರಕಾರ ಕೇಸು ದಾಖಲಿಸಿ ಅವರನ್ನು ಬಂಧಿಸಿ ಜೈಲಿನಲ್ಲಿರಿಸಲಾಗಿದೆ.

ಮೊಗ್ರಾಲ್ ಪತ್ತೂರಿನಲ್ಲಿ ಚಿನ್ನದ ವ್ಯಾಪಾರಿಯನ್ನು ಅಪಹರಿಸಿ ದರೋಡೆಗೈದ ಪ್ರಕರಣದ ಎರಡನೇ ಆರೋಪಿ ವಯನಾಡು, ಫುಲ್ ಪಳ್ಳಿ ಪಂಜಲ್ಲೂರು, ಮುನ್ನಂಪಾಲ ಚಕ್ಕಾಲಿಕಲ್ ಹೌಸಿನ ಸುಜಿತ್ (26) ಮತ್ತು ಏಳನೇ ಆರೋಪಿ ವಯನಾಡ್ ಪನಮರು ನಡ ವಯಲ್ ಕಾಯಕುನ್ನು ಪತಿಪಾಕ್ಕಲ್ ಹೌಸಿನ ಜೋಬಿಕ್‌ ಜೋಸೆಫ್ (23) ಎಂಬವರವಿರುದ್ಧ ಈ ರೀತಿ ಕಾಪಾ ಪ್ರಕಾರ ಕೇಸು ದಾಖಲಿಸಿ ಬಂಧಿಸಿ ಜೈಲಿಗಟ್ಟಲಾಗಿದೆ. ಈ ಇಬ್ಬರು ವಯನಾಡಿನಲ್ಲಿ ನಡೆದ ಪ್ರಕರಣಗಳ ಆರೋಪಿಗಳಾಗಿದ್ದಾರೆಂದು ಪೊಲೀಸರು ಹೇಳಿದ್ದಾರೆ.

- Advertisement -

Related news

error: Content is protected !!