Friday, April 26, 2024
spot_imgspot_img
spot_imgspot_img

ಮಂಗಳೂರು: 6 ವರ್ಷಗಳಿಂದ 2 ಮಕ್ಕಳ ತಾಯಿಯೊಂದಿಗೆ ಲಿವಿಂಗ್ ಟುಗೇದರ್ ರಿಲೇಶನ್ ಶಿಪ್; ತಡವಾಗಿ ಬೆಳಕಿಗೆ ಬಂದ ಪ್ರಕರಣ

- Advertisement -G L Acharya panikkar
- Advertisement -

ಮಂಗಳೂರು: ಅಶೋಕನಗರದಲ್ಲಿ ಕಳೆದ 6 ವರ್ಷಗಳಿಂದ ದಂಪತಿಗಳ ರೀತಿ ಬಾಳು ನಡೆಸುತ್ತಿದ್ದ ಜೋಡಿ ಲಿವಿಂಗ್ ರಿಲೇಶನ್ ಶಿಪ್‌ನಲ್ಲಿರುವುದು ತಡವಾಗಿ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆಂದೂ ಪೊಲೀಸ್ ಠಾಣೆಗೆ ದೂರು ನೀಡಲು ಬಂದಾಗ ಈ ಕೃತ್ಯ ಬೆಳಕಿಗೆ ಬಂದಿದೆ.

30 ವರ್ಷದ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಆಕೆಯ ಪತಿ ಎಂದು ಹೇಳಿಕೊಂಡ ವ್ಯಕ್ತಿ ಮಂಗಳೂರಿನ ಉರ್ವ ಠಾಣೆಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದ. ಈ ಪ್ರಕರಣ ಭೇದಿಸುವ ವೇಳೆ ಇವರದು ಗಂಡ ಹೆಂಡತಿ ಸಂಬಂಧವಲ್ಲ, ಆರು ವರ್ಷಗಳ ಕಾಲಮುಚ್ಚಿಟ್ಟ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಎಂದು ಬಯಲಾಗಿದೆ.

ಈ ಜೋಡಿ ಗದಗ ಮೂಲದವರಾಗಿದ್ದು ಮಹಿಳೆಗೆ ಈ ಹಿಂದೆ ಮದುವೆಯಾಗಿ ಇಬ್ಬರು ಮಕ್ಕಳಿದ್ದರು. ಈಕೆಯ ಪತಿ ಘಟನೆಯೊಂದರಲ್ಲಿ ಸಾವನ್ನಪ್ಪಿದ ಆ ಬಳಿಕ ಈಕೆಗೆ ಯುವಕನೊಬ್ಬನ ಜೊತೆಗೆ ಪ್ರೇಮಾಂಕುರವಾಗಿತ್ತು. ಇವರು ಮದುವೆಯಾಗದೆ ಜೀವನ ನಡೆಸಲು ನಿರ್ಧರಿಸಿ ಮಂಗಳೂರಿಗೆ ಬಂದಿದ್ದ ರು. ಹೊರಗಿನ ಸಮಾಜಕ್ಕೆ ಇವರು ಗಂಡ ಹೆಂಡತಿಯರಂತೆ ಇಬ್ಬರು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ.

ಪ್ರಕರಣ ಭೇದಿಸುವ ವೇಳೆ ಮಹಿಳೆ ನಿಜಾಂಶ ಬಯಲು ಮಾಡಿದ್ದಾಳೆ. ಯುವಕನ ಹಿಂಸೆಯಿಂದ ಬೇಸತ್ತು ಆತನಿಂದ ದೂರ ಹೋಗುವಂತೆ ಪ್ರೇರೆಪಿಸಿದೆ. ಇತ್ತೀಚೆಗೆ ಯುವಕ ಗದಗಕ್ಕೆ ಹೋಗಿದ್ದು ಈ ವೇಳೆ ಆತನಿಗೆ ಗೊತ್ತಾಗದಂತೆ ಈ ಮಹಿಳೆ ತನ್ನಿಬ್ಬರು ಮಕ್ಕಳೊಂದಿಗೆ ಊರಿಗೆ ಪರಾರಿಯಾಗಿದ್ದಾಳೆ. ಮಂಗಳೂರಿಗೆ ವಾಪಾಸಾದ ಯುವಕನಿಗೆ ಮನೆಯಲ್ಲಿ ಮಹಿಳೆ ಮತ್ತು ಮಕ್ಕಳು ಇಲ್ಲದೆ ಇರುವುದು ಆತಂಕವಾಗಿದ್ದು ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಂದೆ ದಿನದಲ್ಲಿ ಮಹಿಳೆಯನ್ನು ಮತ್ತು ಮಕ್ಕಳನ್ನು ಪತ್ತೆ ಹಚ್ಚಿದ್ದು ವಿಚಾರಣೆ ವೇಳೆ ಆತನೊಂದಿಗಿನ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಮತ್ತು ಆತನ ಹಿಂಸೆಯನ್ನು ಹೇಳಿದ್ದಾಳೆ. ಒಟ್ಟಿನಲ್ಲಿ ನಾಪತ್ತೆ ಪ್ರಕರಣ ತನಿಖೆ ಮಾಡಲುಹೋದ ಪೊಲೀಸರಿಗೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಬೆಳಕಿಗೆ ಬಂದಿದೆ.

driving
- Advertisement -

Related news

error: Content is protected !!