Thursday, June 11, 2026
spot_imgspot_img
spot_imgspot_img

ಕಾಸರಗೋಡು: ಕುಸಿದು ಬಿದ್ದ ನಿರ್ಮಾಣ ಹಂತದ ಮೇಲ್ಸೇತುವೆ : ಓರ್ವ ಕಾರ್ಮಿಕನಿಗೆ ಗಾಯ, ಕಾಮಗಾರಿ ಸ್ಥಗಿತ

- Advertisement -
- Advertisement -

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಹಿನ್ನಲೆಯಲ್ಲಿ ನಿರ್ಮಿಸಲಾಗುತ್ತಿದ್ದ ಮೇಲ್ಸೇತುವೆಯ ಕಾಂಕ್ರೀಟ್ ಕುಸಿದು ಬಿದ್ದ ಘಟನೆ ಪೆರಿಯದಲ್ಲಿ ಇಂದು ಮುಂಜಾನೆ ನಡೆದಿದೆ. ಪೆರಿಯ ಪೇಟೆ ಬಳಿ ನಿರ್ಮಿಸಲಾಗುತ್ತಿದ್ದ ಸೇತುವೆಯ ಕಾಂಕ್ರೀಟ್ ಕುಸಿದು ಬಿದ್ದಿದ್ದು, ಓರ್ವ ಕಾರ್ಮಿಕ ಗಾಯಗೊಂಡಿದ್ದಾನೆ.

ಘಟನೆ ಸಂದರ್ಭದಲ್ಲಿ ಐವರು ಕಾರ್ಮಿಕರಿದ್ದರು ಎನ್ನಲಾಗಿದೆ. ರಾತ್ರಿ ವೇಳೆಯೂ ಈ ಕಾಮಗಾರಿ ನಡೆಯುತ್ತಿತ್ತು . ಉಳಿದ ನಾಲ್ವರು ಅಪಾಯದಿಂದ ಪಾರಾಗಿದ್ದಾರೆ. ಅವೈಜ್ಞಾನಿಕ ಕಾಮಗಾರಿ ಘಟನೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ. ಗುತ್ತಿಗೆ ಕಂಪೆನಿ ಬೇಕಲ ಠಾಣಾ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಮೇಲ್ಸೇತುವೆ ಕಾಮಗಾರಿ ಕುಸಿದು ಬಿದ್ದ ಬಗ್ಗೆ ತಪಾಸಣೆ ನಡೆಸಲಾಗುವುದು . ವರದಿ ಲಭಿಸಿದ ಬಳಿಕ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ರಾಜ್ಯ ಲೋಕೋಪಯೋಗಿ ಸಚಿವೆ ಪಿ. ಎ ಮುಹಮ್ಮದ್ ರಿಯಾಜ್ ತಿಳಿಸಿದ್ದಾರೆ . ಕಾಮಗಾರಿಯನ್ನು ಕೂಡಲೇ ಸ್ಥಗಿತ ಗೊಳಿಸುವಂತೆ ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!