Tuesday, April 30, 2024
spot_imgspot_img
spot_imgspot_img

ಕಾಸರಗೋಡು: ಬಿಜೆಪಿ ಬಲಿದಾನಿಗಳ ಅವಮಾನಕ್ಕೆ ಮನನೊಂದು ಪಕ್ಷದ ಹುದ್ದೆಗಳಿಗೆ ರಾಜಿನಾಮೆ ನೀಡಿದ ಬಿಜೆಪಿ ಪದಾಧಿಕಾರಿಗಳು

- Advertisement -G L Acharya panikkar
- Advertisement -

ಕಾಸರಗೋಡು: ಕೇರಳದಲ್ಲಿ ಬಾಜಪ ಪಕ್ಷದ ಶಕ್ತಿ ಕೇಂದ್ರವಾಗಿದ್ದ ಕಾಸರಗೋಡು ಹಾಗೂ ಮಂಜೇಶ್ವರ ಮಂಡಲದ ವಿವಿಧ ನಾಯಕರುಗಳು ಇಂದು ತಮ್ಮ ಪಕ್ಷದ ಹುದ್ದೆಗಳಿಗೆ ರಾಜಿನಾಮೆ ಘೋಷಿಸುತ್ತಿರುವ ವಿಲಕ್ಷಣ ಪ್ರಕರಣಗಳು ಕಂಡು ಬರುತ್ತಿದೆ.
ಈ ಎರಡು ಮಂಡಲಗಳಲ್ಲಿ ಬಲಿದಾನಿಗಳನ್ನು ಹಾಗೂ ಅವರ ಅನಾಥ ಕುಟುಂಬಗಳನ್ನು ಅವಗಣಿಸಿ ಪಕ್ಷದ ಉನ್ನತ ನೇತಾರರು ಎಡ-ಬಲ ರಂಗದೊಂದಿಗೆ ಕೈಜೋಡಿಸಿರುವ ಕಾರಣ ಮುಂದಿಟ್ಟು ಕಳೆದ ಒಂದು ವರ್ಷದಿಂದ ಪಕ್ಷದೊಳಗೆ ನಿರಂತರ ಚರ್ಚೆ ನಡೆದಿತ್ತು. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ನಡೆಯದಿದ್ದು ಮೊನ್ನೆ ಪಕ್ಷದ ಯುವ ಪ್ರಭಾವಿ ನಾಯಕನಾದ ಕಾಸರಗೋಡು ಅಣಂಗೂರಿನ ಜ್ಯೋತಿಷ್ ಸಾವಿನಲ್ಲೂ ಬಿಜೆಪಿ ಪಕ್ಷದ ಉನ್ನತ ನಾಯಕರ ನಿಲುವನ್ನು ಪ್ರತಿಭಟಿಸಿ ಪಾರ್ಟಿಯ ವಿವಿಧ ಹುದ್ದೆಯ ಯುವ ನಾಯಕರು ತಮ್ಮ ಸ್ಥಾನಗಳಿಗೆ ರಾಜಿನಾಮೆ ಘೋಷಿಸುವ ಮೂಲಕ ಇದೀಗ ತಮ್ಮ ಅಸಮಾಧಾನ ಹೊರಗೆಡಹಿದ್ದಾರೆ.

vtv vitla
vtv vitla

ಹುಟ್ಟಿನಿಂದ ಈವರೆಗೆ ಸಂಘಟನೆ ಹಾಗೂ ಕಾರ್ಯಕರ್ತರಿಗೆ ಬೇಕಾಗಿ ಮಾತ್ರ ತನ್ನ ಜೀವನವನ್ನು ಮುಡಿಪಾಗಿಟ್ಟ ಕಾರ್ಯಕರ್ತರು ಯಾವ ರಾತ್ರಿ ಕರೆದರೂ ಕೂಡಲೇ ಅವರ ಕಷ್ಟಕ್ಕೆ ಸ್ಪಂದಿಸುವ ಕಾಸರಗೋಡಿನ ದೀಮಂತ ನಾಯಕ. ಕುಂಬಳೆ ವಿಷಯದಲ್ಲಿ ಪಕ್ಷದಿಂದ ಕಾರ್ಯಕರ್ತರಿಗೆ ಆಗುವ ನೋವಿಗೆ ಮನನೊಂದು ಪಕ್ಷದ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಪಿ ರಮೇಶ್ (ಹುಬ್ಬಳ್ಳಿ ರಮೇಶ್ ), ಸುರೇಶ್ ಶೆಟ್ಡಿ ಹೆರೂರು, ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ನವೀನ್ ರಾಜ್ ಮಂಜೇಶ್ವರ ಜತೆಗೆ ಕಿಶೋರ್ ಭಗವತಿ, ಮಂಜೇಶ್ವರ ಐಟಿ ಸೆಲ್ ಪ್ರಮುಖ್ ಜಯರಾಜ್ ಶೆಟ್ಟಿ ಕುಳೂರು, ಲೊಕೇಶ್ ನೋಂಡಾ, ಪದ್ಮನಾಭ ಕಡಪ್ಪುರ, ಸಂತೋಷ್ ದೈಗೋಳಿ, ನವೀನ್ ಬೆಜ್ಜ, ಯತೀಶ್ ಭಂಡಾರಿ ಕೌಡೂರು ಬೀಡು ಮೊದಲಾದವರು ಇದುವರೆಗೆ ರಾಜಿನಾಮೆ ಘೋಷಿಸಿರುವವರಲ್ಲಿ ಪ್ರಮುಖರಾಗಿದ್ದಾರೆ. ಈ ಬಗ್ಗೆ ಪಕ್ಷದ ಉನ್ನತ ಸಮಿತಿ ರಾಜಿನಾಮೆ ಅಂಗೀಕರಿಸಿದ ಬಗ್ಗೆ ತಿಳಿದು ಬಂದಿಲ್ಲ.

ಪಕ್ಷದೊಳಗಿನ ಮನಸ್ತಾಪದ ಬಗ್ಗೆ ಜ್ಯೋತಿಷ್ ಆಡಿದ ಆಡಿಯೋ ವೈರಲ್; ನಿಜಕ್ಕೂ ಸಂಭವಿಸಿರುವುದೇನು..?

ಕಳೆದ ಎರಡು ಚುನಾವಣಾ ಸಮಯದಲ್ಲಿ ಹಾಗೂ ಆ ಬಳಿಕದ ಬೆಳವಣಿಗೆಯಲ್ಲಿ ಪಕ್ಷವು ಸಾಮಾನ್ಯ ಕಾರ್ಯಕರ್ತರ ಹಾಗೂ ಪಕ್ಷದ ತತ್ವ ಸಿದ್ಧಾಂತಗಳನ್ನು ಬಲಿಗೊಟ್ಟು ನಾಯಕರುಗಳು ಸ್ವಯಂ ಪ್ರತಿಷ್ಠೆ ಮೆರೆಯುತ್ತಿದ್ದು ಭವಿಷ್ಯದಲ್ಲಿ ಇದು ಶಕ್ತಿ ಕೇಂದ್ರವಾಗಿದ್ದ ಪ್ರದೇಶದ ಬೆಳವಣಿಗೆಗೆ ಮಾರಕವಾಗಲಿದೆ ಎಂಬ ಸುದ್ದಿ ಇದೀಗ ಚರ್ಚೆಗೆ ಅಸ್ಪದವಾಗಿದೆ.

ಹಿಂದುತ್ವದ ಸ್ವಾಭಿಮಾನಿ ಕಾರ್ಯಕರ್ತರಾಗಿದ್ದ ಜ್ಯೋತಿಷ್ ಅವರ ಸೋದರ ಮಾವ ಬಿ.ಟಿ ವಿಜಯನ್ ಅವರನ್ನು ಕೊಂದ ಪ್ರಕರಣದಲ್ಲಿ ಆರೋಪಿಯೋರ್ವರಿಗೆ ಕುಂಬಳೆ ಪಂಚಾಯಿತಿನಲ್ಲಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿಸಲು ಬಿಜೆಪಿ ಪಕ್ಷದ ಕೆಲವು ನಾಯಕರುಗಳು ಬೆಂಬಲ ನೀಡಿರುವುದು ಜ್ಯೋತಿಷ್ ಗೆ ಬಿಜೆಪಿಯ ಮೇಲೆ ಬೇಸರ ಮೂಡಿಸಿತ್ತು ಎಂದು ಅವರ ಆಪ್ತ ವಲಯ ಇದೀಗ ಬಹಿರಂಗಪಡಿಸುತ್ತಿದೆ. ಇದೇ ವಿಷಯದ ಬಗ್ಗೆ ಮಂಜೇಶ್ವರ ಹಾಗೂ ಕುಂಬಳೆಯ ಪಕ್ಷದ ಸಾಮಾನ್ಯ ಕಾರ್ಯಕರ್ತರು ಪ್ರಶ್ನಿಸಿದ್ದರು.

ಈ ಬಗ್ಗೆ ಮೃತ ಜ್ಯೋತಿಷ್ ಅವರು 2022 ಜನವರಿ 23ರಂದು ಮಾತನಾಡಿದ ಆಡಿಯೋ ಕ್ಲಿಪ್ಪೊಂದು ವಾಟ್ಸಫ್ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದ್ದು ಬಳಿಕ ಚರ್ಚಾಸ್ಪದ ವಿಷಯವಾಗಿತ್ತು.

ಇದೀಗ ಪದಾಧಿಕಾರಿಗಳ ರಾಜಿನಾಮೆಗಳು ವಿಷಯ ಗಂಭೀರತೆಗೆ ಕಾರಣವಾಗಿದ್ದು ಎಲ್ಲವನ್ನು ನಿಯಂತ್ರಿಸಬೇಕಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರ ಸಹಿತ ಎಲ್ಲರೂ ಗಾಢ ಮೌನವಹಿಸುತ್ತಿರುವುದು ಪಕ್ಷದ ಅಭಿಮಾನಿಗಳ ತಳಮಳಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!