Thursday, June 18, 2026
spot_imgspot_img
spot_imgspot_img

ಕಾಸರಗೋಡು: ಬೈಕ್‌ ಡಿಕ್ಕಿ ಹೊಡೆದು ಯುವಕ ಮೃತ್ಯು

- Advertisement -
- Advertisement -

ಕಾಸರಗೋಡು: ರಸ್ತೆ ಅಡ್ಡದಾಟುತ್ತಿದ್ದಾ ಬೈಕ್‌ ಡಿಕ್ಕಿ ಹೊಡೆದು ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ. ಚೆನ್ನಾಡ್ ಆಲಿಚ್ಚೇರಿ ನಿವಾಸಿ ಮಹೇಶ್‌ (30) ಮೃತಪಟ್ಟ ಯುವಕ.

ಚಂದ್ರಗಿರಿ ಸೇತುವೆ ಸಮೀಪ ವಡಕುಂಬಾಟ್ ಎಂಬಲ್ಲಿ ಅಪಘಾತ ಸಂಭವಿಸಿದೆ. ಮಹೇಶ್‌ ಎಂಬವರು ಚೆಮ್ಯಾಡ್‌ನ ಲೈಟ್ ಆ್ಯಂಡ್ ಸೌಂಡ್ಸ್ ಸಂಸ್ಥೆಯೊಂದರ ನೌಕರನಾಗಿದ್ದಾರೆ. ರಾತ್ರಿ ಕೋಳಿ ಮಾಂಸ ಖರೀದಿಸಿ ವಡಕುಂಬಾಟ್‌ನ ಮಾಲಕನ ಮನೆಗೆ ತೆರಳಲು ರಸ್ತೆ ಅಡ್ಡ ದಾಟುತ್ತಿದ್ದ ವೇಳೆ ಆಗಮಿಸಿದ ಬೈಕ್‌ ಅವರಿಗೆ ಢಿಕ್ಕಿ ಹೊಡೆದಿದೆ.

ಇದರಿದ ಗಂಭೀರ ಗಾಯಗೊಂಡ ಮಹೇಶ್‌ರನ್ನು ಕೂಡಲೇ ಪರಿಯಾರ೦ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

- Advertisement -

Related news

error: Content is protected !!