Tuesday, July 28, 2026
spot_imgspot_img
spot_imgspot_img

ಕಾಸರಗೋಡು: ಲಾರಿ-ಸ್ಕೂಟರ್ ನಡುವೆ ಭೀಕರ ಅಪಘಾತ; ಇಬ್ಬರು ಮೃತ್ಯು

- Advertisement -
- Advertisement -

ಕಾಸರಗೋಡು: ಲಾರಿ ಮತ್ತು ಸ್ಕೂಟರ್ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಬುಧವಾರ ಸಂಜೆ ವೆಳ್ಳರಿಕುಂಡು ಸಮೀಪದ ಕನಕಪಳ್ಳಿ ಎಂಬಲ್ಲಿ ನಡೆದಿದೆ.

ಅಪಘಾತದಲ್ಲಿ ಸ್ಕೂಟರ್ ಸವಾರರಾದ ಉಮೇಶ್(22) ಮತ್ತು ಮಣಿಕಂಠ(18) ಮೃತಪಟ್ಟವರು. ಮಣಿಕಂಠ ವಳ್ಳಿಕಡವು ಸರಕಾರಿ ಹಯರ್ ಸೆಕೆಂಡರಿ ಶಾಲೆಯ ಪ್ಲಸ್ ಟು ವಿದ್ಯಾರ್ಥಿಯಾಗಿದ್ದನು.

ಸಂಜೆ 6.30 ರ ಸುಮಾರಿಗೆ ಅಪಘಾತ ನಡೆದಿದೆ. ವೆಳ್ಳರಿಕಂಡು ಕಡೆಯಿಂದ ಪರಪ್ಪಕ್ಕೆ ತೆರಳುತ್ತಿದ್ದ ಸ್ಕೂಟರ್ ಹಾಗೂ ಪಾರ್ಸೆಲ್ ಹೇರಿಕೊಂಡು ಬರುತ್ತಿದ್ದ ಲಾರಿ ನಡುವೆ ಅಪಘಾತ ನಡೆದಿದೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಇಬ್ಬರು ಗಂಭೀರ ಗಾಯ ಗೊಂಡಿದ್ದು, ಆಸ್ಪತ್ರೆ ಗೆ ತಲಪಿಸದರೂ ಜೀವ ಉಳಿಸಲಾಗಳಿಲ್ಲ. ಮೃತ ದೇಹವನ್ನು ಜಿಲ್ಲಾಸ್ಪತ್ರೆಯಲ್ಲಿರಿಸಲಾಗಿದೆ.

- Advertisement -

Related news

error: Content is protected !!