Friday, April 26, 2024
spot_imgspot_img
spot_imgspot_img

ಕಿನ್ನಿಗೋಳಿ ಪರಿಸರದಲ್ಲಿ ಕಾಟ ಕೊಡುತ್ತಿದ್ದ ಚಿರತೆ ಕೊನೆಗೂ ಬೋನಿಗೆ ಬಿತ್ತು..!!

- Advertisement -G L Acharya panikkar
- Advertisement -

ಮಂಗಳೂರು: ಮುಲ್ಕಿ ಕಿನ್ನಿಗೋಳಿ ಸಮೀಪದ ತಾಳಿಪಾಡಿ ಗ್ರಾಮದ ಅಂತಲಚ್ಚಿಲ್ ನಾಗಬನದ ಗುಡ್ಡೆ ಬಳಿ ಚಿರತೆಯೊಂದು ಆಹಾರ ಹುಡುಕಿಕೊಂಡು ಬಂದು ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದ ಘಟನೆ ನಡೆದಿದೆ.

ಕೆಲವು ತಿಂಗಳ ಹಿಂದೆ ಕಿನ್ನಿಗೋಳಿ-ತಾಳಿಪಾಡಿ ಪರಿಸರದಲ್ಲಿ ಚಿರತೆ ಕಾಟ ವಿಪರೀತವಾಗಿದ್ದು, ಮನೆಯವರ ನಾಯಿ ಸಹಿತ ಅನೇಕ ಸಾಕುಪ್ರಾಣಿಗಳು ನಾಪತ್ತೆಯಾಗಿ, ಚಿರತೆಗೆ ಆಹಾರವಾಗಿದ್ದವು.

vtv vitla
vtv vitla

ಈ ಸಂದರ್ಭ ಸ್ಥಳೀಯರಿಂದ ದೂರು ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಅರಣ್ಯಾಧಿಕಾರಿಗಳು ಚಿರತೆ ಹಿಡಿಯಲು ಬೋನು ಇರಿಸಿದ್ದರು.

ನಿನ್ನೆ ರಾತ್ರಿ 9 ಗಂಟೆ ವೇಳೆಗೆ ಆಹಾರ ಹುಡುಕಿಕೊಂಡು ಬಂದ ಚಿರತೆ ಬೋನಿನೊಳಗೆ ಸೆರೆಯಾಗಿದೆ. ಇದೀಗ ಮೂಡುಬಿದಿರೆ ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಚಿರತೆ ನೋಡಲು ಕುತೂಹಲಿಗರ ದಂಡೇ ಸೇರುತ್ತಿದೆ.

vtv vitla
vtv vitla
- Advertisement -

Related news

error: Content is protected !!