Monday, June 22, 2026
spot_imgspot_img
spot_imgspot_img

ಕುಂದಾಪುರ: ಇಲಿ ಪಾಷಾಣ ಸೇವಿಸಿ ಹಿಂದೂ ಯುವತಿ ಆತ್ಮಹತ್ಯೆ ಪ್ರಕರಣ; ವಿವಾಹಿತ ಮುಸ್ಲಿಂ ವ್ಯಕ್ತಿಯ ಲವ್ ಜಿಹಾದ್ ಷಡ್ಯಂತ್ರಕ್ಕೆ ಬಲಿಯಾದಳೇ ಯುವತಿ

- Advertisement -
- Advertisement -

ಕುಂದಾಪುರ: ಕಳೆದ ಎರಡು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ (ಮೇ.25) ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಆಕೆಯ ಸಾವಿಗೆ ಪ್ರೀತಿಯ ನಾಟಕವಾಡಿ ಬಳಿಕ ಆತ್ಮಹತ್ಯೆಗೆ ಪ್ರೇರಣೆ ನೀಡಿದ್ದ ಆರೋಪಿ ಪತಿ- ಪತ್ನಿಯೇ ಕಾರಣವೆಂದು ಕುಟುಂಬಿಕರು ಆರೋಪಿಸಿದ್ದು ಇದು ಲವ್ ಜಿಹಾದ್ ಷಡ್ಯಂತ್ರ ಎಂದು ಹಿಂದೂ ಸಂಘಟನೆಗಳು ಆರೋಪಿಸಿದೆ.

ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ತಲ್ಲೂರು ಗ್ರಾಮಪಂಚಾಯತ್ ವ್ಯಾಪ್ತಿಯ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ (25) ಮೃತ ಯುವತಿ. ಕೋಟೇಶ್ವರದ ನಿವಾಸಿ ಅಝೀಝ್ (32), ಆತನ ಪತ್ನಿ ಸಲ್ಮಾ ಅಜೀಝ್ ಎನ್ನುವರು ತನ್ನ ಸಹೋದರಿ ಆತ್ಮಹತ್ಯೆಗೆ ಕಾರಣ ಎಂದು ಶಿಲ್ಪಾ ಸಹೋದರ ಕುಂದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಎಸ್.ಎಸ್.ಎಲ್.ಸಿ ವಿದ್ಯಾಭ್ಯಾಸದ ಬಳಿಕ ಶಿಲ್ಪಾ ಕಳೆದ ಮೂರು ವರ್ಷದಿಂದ ತಲ್ಲೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಟ್ಯುಟೋರಿಯಲ್ ನಲ್ಲಿ ಓದುತ್ತಿರುವಾಗಲೇ ಆರೋಪಿ ಅಜೀಝ್ ಪರಿಚಯವಾಗಿದ್ದು ಆತನೊಂದಿಗೆ ಸ್ನೇಹ- ಪ್ರೇಮಾಂಕುರವಾಗಿತ್ತು. ಆತ ಮದುವೆಯಾಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ. ಶಿಲ್ಪಾ ಆರೋಪಿ ಮನೆಗೂ ಹೋಗಿಬರುತ್ತಿದ್ದು ಈ ವಿಚಾರ ಆತನ ಪತ್ನಿಗೆ ತಿಳಿದಿದ್ದು ಆಕೆಯ ಪ್ರೇರೇಪಣೆಯೂ ಇತ್ತು. ಈತನ್ಮದ್ಯೆ ಇಬ್ಬರ ನಡುವೆ ಜಗಳವೂ ಆಗುತ್ತಿದ್ದು ಆರೋಪಿ ಅಜೀಝ್ ಇತ್ತೀಚೆಗೆ ಆಕೆ ಕೆಲಸ ಮಾಡುತ್ತಿದ್ದ ಬಟ್ಟೆಯಂಗಡಿಗೆ ಬಂದು ನಿಂದಿಸಿದ್ದ.

ಪ್ರೀತಿಸಿ ಮದುವೆಯಾಗುವ ಭರವಸೆ ನೀಡಿ ಕೊನೆಗೆ ಮದುವೆಯಾಗುವುದಿಲ್ಲ ಎಂದು ಮೋಸ ಮಾಡಿದ್ದಲ್ಲದೆ ಆರೋಪಿಗಳಾದ ಗಂಡ-ಹೆಂಡತಿ ಶಿಲ್ಪಾಳಿಗೆ ಬೈದು ಆತ್ಮಹತ್ಯೆಗೆ ಪ್ರಚೋದನೆ ಮಾಡಿದ್ದಾರೆ. ಇದರಿಂದ ನೊಂದ ಆಕೆ ಮೇ.23 ರಾತ್ರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅಕೆಯನ್ನು ಮಣಿಪಾಲ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ವೇಳೆ ಮಾತನಾಡುವ ಸ್ಥಿತಿಯಲ್ಲಿದ್ದಾಗ ಆರೋಪಿಗಳಾದ ಅಜೀಝ್ ಹಾಗೂ ಸಲ್ಮಾ ಮಾನಸಿಕ ಹಿಂಸೆ ನೀಡಿ, ಮರ್ಯಾದೆ ತೆಗೆದಿದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾಗಿ ತಿಳಿಸಿದ್ದಳು ಎಂದು ಆಕೆ ಸಹೋದರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಬೈಂದೂರು ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ತಲ್ಲೂರು ಗ್ರಾಮಪಂಚಾಯತ್ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ರಾಧಾಕೃಷ್ಣ ಶೇರಿಗಾರ್, ಮಾಜಿ ತಾ.ಪಂ ಸದಸ್ಯ ಕರಣ್ ಪೂಜಾರಿ, ಪ್ರಮುಖರಾದ ಸದಾನಂದ ಉಪ್ಪಿನಕುದ್ರು, ಸುಧಾಕರ ಶೆಟ್ಟಿ ನೆಲ್ಯಾಡಿ, ಪಕ್ಷ ಹಾಗೂ ಸಂಘಟನೆ ಪದಾಧಿಕಾರಿಗಳು ಇದ್ದರು.

- Advertisement -

Related news

error: Content is protected !!