- Advertisement -
- Advertisement -




ಕುಂಬಳೆ: ಒಂದೂವರೆ ವರ್ಷಗಳ ಹಿಂದೆ ೯ ವರ್ಷದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಪೆರುವಾಡ್ ಕಡಪ್ಪರ ನಿವಾಸಿ ಇಬ್ರಾಹಿಂ ಯಾನೆ ಇಬು (36) ಎನ್ನಲಾಗಿದೆ.
ಈತ 2021 ಜೂನ್ ತಿಂಗಳಲ್ಲಿ ಒಂಭತ್ತರ ಹರೆಯದ ಬಾಲಕನಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆಂದು ದೂರಲಾಗಿದೆ. ಶಾಲೆಯಲ್ಲಿ ಇತ್ತೀಚೆಗೆ ನಡೆಸಿದ ಕೌನ್ಸಿಲಿಂಗ್ ವೇಳೆ ಬಾಲಕ ಈ ವಿಷಯವನ್ನು ಅಧಿಕಾರಿಗಳಲ್ಲಿ ತಿಳಿಸಿದ್ದಾನೆ. ಅಧಿಕಾರಿಗಳು ಶಾಲಾ ಮುಖ್ಯೋಪಾಧ್ಯಾಯರಿಗೆ ತಿಳಿಸಿದ್ದು, ಅವರು ಚೈಲ್ಡ್‌ಲೈನ್‌ಗೆ ಮಾಹಿತಿ ನೀಡಿದ್ದಾರೆ.
ಇದರಂತೆ ಚೈಲ್ಡ್‌ಲೈನ್ ಅಧಿಕಾರಿಗಳು ನೀಡಿದ ದೂರಿನಂತ ಪೊಲೀಸರು ಆರೋಪಿ ವಿರುದ್ಧ ಪೋಕ್ಸ್ ಕೇಸು ದಾಖಲಿಸಿ ಆತನನ್ನು ಬಂಧಿಸಿದ್ದಾರೆ.

- ಬಿಜೆಪಿ ಮುತ್ತಿಗೆ ಯತ್ನದ ವೇಳೆ ಉದ್ವಿಗ್ನತೆ; ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ
- ಬಂಟ್ವಾಳ: ಶಾಲಾ ಬಸ್ ಮೇಲೆ ಉರುಳಿ ಬಿದ್ದ ಬೃಹತ್ ಮರ..!
- ಸರ್ಕಾರ ನಮ್ಮನ್ನು ಸಂಪರ್ಕಿಸುತ್ತಿದೆ, ಮಾತುಕತೆಗೆ ಕರೆದರೆ ನಾವು ಸಿದ್ಧ–ಸಿಜೆಪಿ ರಾಷ್ಟ್ರೀಯ ವಕ್ತಾರ
- ವಿಟ್ಲ: ಜು.23ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ಘಟಕ ವತಿಯಿಂದ ಪತ್ರಿಕಾ ದಿನಾಚರಣೆ
- ಪಂಜಾಬ್ನಲ್ಲಿ ಹೈಟೆಕ್ ಪರೀಕ್ಷಾ ಅಕ್ರಮ ಬಯಲು; 35 ಮಂದಿ ಅರೆಸ್ಟ್
- Advertisement -








