Thursday, April 25, 2024
spot_imgspot_img
spot_imgspot_img

ಕುಟುಂಬದಲ್ಲಿ ಹೆಣ್ಣು ಮಗು ಜನಿಸಿದ ಸಂಭ್ರಮದಲ್ಲಿ ಗ್ರಾಹಕರಿಗೆ ಉಚಿತ ಪೆಟ್ರೋಲ್ ನೀಡಿದ ವ್ಯಕ್ತಿ!

- Advertisement -G L Acharya panikkar
- Advertisement -
driving

ಮಧ್ಯಪ್ರದೇಶ: ವ್ಯಕ್ತಿಯೊಬ್ಬ ತನಗೆ ಹೆಣ್ಣು ಮೊಮ್ಮಗು ಹುಟ್ಟಿದ್ದಕ್ಕೆ ಜನರಿಗೆ ಉಡುಗೊರೆ ರೂಪದಲ್ಲಿ ಪೆಟ್ರೋಲ್​ನ್ನು ನೀಡಿದ್ದಾರೆ. ಈ ವ್ಯಕ್ತಿಯ ಹೆಸರು ರಾಜೇಂದ್ರ ಸೈನಾನಿ ಎಂದಾಗಿದ್ದು, ಬೇತುಲ್​​ನಲ್ಲಿ ಪೆಟ್ರೋಲ್​ ಪಂಪ್​ ಒಂದರ ಮಾಲೀಕರಾಗಿದ್ದಾರೆ.

ಇವರ ಸೊಸೆಗೆ ಮಾತು ಬರುವುದಿಲ್ಲ ಮತ್ತು ಕಿವಿಯೂ ಕೇಳುವುದಿಲ್ಲ. ಆಕೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಇದರಿಂದ ಸಿಕ್ಕಾಪಟ್ಟೆ ಖುಷಿಗೊಂಡ ರಾಜೇಂದ್ರ ಸೈನಾನಿ ಹೀಗೆ ಹೆಚ್ಚುವರಿ ಪೆಟ್ರೋಲ್​ ನೀಡಿದ್ದಾರೆ.

ಈ ಖುಷಿಯ ಆಚರಣೆಗಾಗಿ ಅವರು ಅಕ್ಟೋಬರ್​ 13ರಿಂದ 15ರವರೆಗೆ, ಬೆಳಗ್ಗೆ 9 ರಿಂದ 11ರವರೆಗೆ ಮತ್ತು ಸಂಜೆ 5ಗಂಟೆಯಿಂದ 7ಗಂಟೆವರೆಗೆ ನನ್ನ ಪಂಪ್​​ಗೆ ಬಂದ ಗ್ರಾಹಕರಿಗೆ ಹೆಚ್ಚುವರಿ ಪೆಟ್ರೋಲ್​ ನೀಡಿದ್ದೇನೆ. ಈ ವೇಳೆಯಲ್ಲಿ ಬಂದು 100 ರೂ.ಪೆಟ್ರೋಲ್​ ಹಾಕಿಸಿದ ಗ್ರಾಹಕರಿಗೆ ಶೇ.5ರಷ್ಟು ಹೆಚ್ಚು ಉಚಿತ ಪೆಟ್ರೋಲ್​ ನೀಡಿದ್ದೇನೆ ಮತ್ತು 200 ರೂ.-500 ರೂ.ವರೆಗಿನ ಪೆಟ್ರೋಲ್​ ಹಾಕಿಸಿದವರಿಗೆ ಶೇ.10ರಷ್ಟು ಹೆಚ್ಚು ಪೆಟ್ರೋಲ್​​​ ನೀಡಿದ್ದೇನೆ. ಈ ಹೆಚ್ಚುವರಿಯಾಗಿ ನೀಡಿದ ಪೆಟ್ರೋಲ್​​ಗೆ ಹಣ ಪಡೆದಿಲ್ಲ ಎಂದು ತಿಳಿಸಿದ್ದಾರೆ.

ಅಂದ ಹಾಗೆ ಇಂದು ಕೂಡ ಪೆಟ್ರೋಲ್​-ಡೀಸೆಲ್​ ದರ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್​ ಮತ್ತು ಡೀಸೆಲ್​ ದರ ಇಂದು 35 ಪೈಸೆ ಏರಿಕೆಯಾಗಿದ್ದು, ಅಲ್ಲೀಗ ಒಂದು ಲೀಟರ್​ ಪೆಟ್ರೋಲ್​ ಬೆಲೆ 105.49 ರೂ. ಇದೆ. ಹಾಗೇ, ಡೀಸೆಲ್​ ದರ 94.22 ರೂ.ನಿಗದಿಯಾಗಿದೆ. ಮುಂಬೈನಲ್ಲಿ ಲೀಟರ್​ ಪೆಟ್ರೋಲ್​​ಗೆ 111.43 ರೂ.ಇದ್ದು, ಡೀಸೆಲ್​ ದರ 102.15ರಷ್ಟಿದೆ. ಹಾಗೇ, ಮಧ್ಯಪ್ರದೇಶದ ಬೇತುಲ್​​ನಲ್ಲಿ ಲೀಟರ್​ಗೆ 113 ರೂ.ಇದೆ.

- Advertisement -

Related news

error: Content is protected !!