Monday, June 15, 2026
spot_imgspot_img
spot_imgspot_img

ಕುಸಿದು ಬಿದ್ದ ಸಿನಿಮಾ ಥಿಯೇಟರ್ ಗೋಡೆ; 24 ಬೈಕ್ ಗಳು ಜಖಂ

- Advertisement -
- Advertisement -

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡಿ ಸುರಿದ ಭಾರಿ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿದ್ದು, ಸಿನಿಮಾ ಥಿಯೇಟರ್ ಒಂದರ ಗೋಡೆ ಕುಸಿದು ಬಿದ್ದು ಅವಘಡ ಸಂಭವಿಸಿದೆ.

ಕೆ.ಆರ್. ಪುರಂನಲ್ಲಿರುವ ಕೃಷ್ಣ ಥಿಯೇಟರ್ ನಲ್ಲಿ ʼಚಾರ್ಲಿʼ ಸಿನಿಮಾ ಪ್ರದರ್ಶನ ನಡೆಯುತ್ತಿತ್ತು.

ಈ ವೇಳೆ ಸುರಿದ ಭಾರಿ ಮಳೆಗೆ ಥಿಯೇಟರ್ ಗೋಡೆಯೇ ಕುಸಿದುಬಿದ್ದಿದೆ. ಥಿಯೇಟರ್ ಕಾಂಪೌಂಡ್ ಬಳಿ ಪಾರ್ಕ್ ಮಾಡಲಾಗಿದ್ದ 24 ಬೈಕ್ ಗಳು ಸಂಪೂರ್ಣ ಜಖಂ ಗೊಂಡಿದ್ದು, ಸಿನಿಮಾ ವೀಕ್ಷಣೆಗೆ ಬಂದ ಪ್ರೇಕ್ಷಕರು ವಾಪಸ್ ಮನೆಗೆ ತೆರಳಲು ಪರದಾಡಿದ್ದಾರೆ. ಮಳೆಯ ಅಬ್ಬರದಿಂದಾಗಿ ಥಿಯೇಟರ್ ಗೋಡೆ ಕುಸಿದಿದ್ದು, ಥಿಯೇಟರ್ ಮಾಲೀಕರ ನಿರ್ಲಕ್ಷವೇ ಈ ಅವಘಡಕ್ಕೆ ಕಾರಣ ಎಂದು ಪ್ರೇಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!