Friday, June 19, 2026
spot_imgspot_img
spot_imgspot_img

ಮದುವೆಯ ಮರುದಿನವೇ ನವವಿವಾಹಿತರು ಶವವಾಗಿ ಪತ್ತೆ ! ಇಬ್ಬರ ಸಾವಿಗೆ ಕಾರಣವೇನು..?

- Advertisement -
- Advertisement -

ಮದುವೆಯ ದಿನ ರಾತ್ರಿಯೇ ನವ ವಿವಾಹಿತರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಬಹ್ರೈಚ್​ನಲ್ಲಿ ನಡೆದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವಧು-ವರರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದ್ದರೂ, ಇಬ್ಬರ ಸಾವಿನಲ್ಲೂ ನಿಗೂಢತೆ ಅಡಗಿದೆ.

ಇಬ್ಬರಿಗೂ ಒಂದೇ ಸಮಯದಲ್ಲಿ ಹೃದಯಾಘಾತವಾಗಿದೆ ಎಂದರೆ ಅದನ್ನು ಒಪ್ಪಲು ಸಾಧ್ಯವಿಲ್ಲ. 22 ವರ್ಷದ ಪ್ರತಾಪ್ ಯಾದವ್ 20 ವರ್ಷದ ಪುಷ್ಪಾ ಎಂಬುವವರು ಮೇ 30 ರಂದು ಮದುವೆಯಾಗಿದ್ದರು. ಮದುವೆಯ ಎಲ್ಲಾ ಕಾರ್ಯಗಳು ಮುಗಿದ ಬಳಿಕ ವಧು-ವರ ಕೋಣೆಗೆ ಹೋಗಿದ್ದರು, ಮರುದಿನ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಪತಿ-ಪತ್ನಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಎಸ್ಪಿ ಪ್ರಶಾಂತ್ ವರ್ಮಾ ತಿಳಿಸಿದ್ದಾರೆ.

- Advertisement -

Related news

error: Content is protected !!