Saturday, May 4, 2024
spot_imgspot_img
spot_imgspot_img

ಕೆದಿಲ ಶ್ಯಾಮ್‌ಪ್ರಸಾದ್‌ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ; ಡಾ.ಕಲ್ಲಡ್ಕ ಪ್ರಭಾಕರ ಭಟ್, ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧದ ಆರೋಪಗಳನ್ನು ರದ್ದುಗೊಳಿಸಿದ ಹೈಕೋರ್ಟ್‌

- Advertisement -G L Acharya panikkar
- Advertisement -
vtv vitla

ಬೆಂಗಳೂರು: 2014ರಲ್ಲಿ ಕೆದಿಲ ನಿವಾಸಿ ಶ್ಯಾಮ್‌ಪ್ರಸಾದ್‌ ಶಾಸ್ತ್ರಿಯವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀ ಹಾಗೂ ಆರ್.ಎಸ್.ಎಸ್.ನಾಯಕ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರ ವಿರುದ್ಧದ ಆರೋಪಗಳನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ಸೇವೆ ಸಲ್ಲಿಸುತ್ತಿದರೆನ್ನಲಾದ ಶ್ಯಾಮಪ್ರಸಾದ್ ಶಾಸ್ತ್ರೀ ಅವರು 2014ರ ಆಗಸ್ಟ್ 31ರಂದು ತನ್ನ ಮನೆಯ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಮೃತರ ಪತ್ನಿ ಸಂಧ್ಯಾ ಲಕ್ಷ್ಮೀ ಅವರು ಪುತ್ತೂರು ನಗರ ಪೊಲೀಸ್‌ ಠಾಣೆಗೆ ದೂರು ನೀಡಿದರು. ರಾಮಚಂದ್ರಾಪುರ ಮಠದ ಪರವಾಗಿರುವ ಕೆಲವರಿಂದ ನಿರಂತರ ಬೆದರಿಕೆ ಕರೆ ಬರುತ್ತಿದ್ದ ಹಿನ್ನೆಲೆಯಲ್ಲಿ ಆತಂಕಕ್ಕೊಳಗಾಗಿ ತನ್ನ ಪತಿ ಕೋವಿಯಿಂದ ಗುಂಡು ಹಾರಿಸಿಕೊಂಡು ಸಾವಿಗೆ ಶರಣಾಗಿದ್ದಾರೆಂದು ಸಂಧ್ಯಾ ಲಕ್ಷ್ಮೀ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದರು.

ಶ್ಯಾಮಪ್ರಸಾದ್ ಶಾಸ್ತ್ರೀಯವರ ಆತ್ಮಹತ್ಯೆ ಪ್ರಕರಣ ಕರಾವಳಿ-ಮಲೆನಾಡು ಜಿಲ್ಲೆಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ಹಲವು ಪ್ರಕರಣಗಳು ಮುನ್ನಲೆಗೆ ಬಂದ ಸಂದರ್ಭದಲ್ಲಿ ರಾಮಚಂದ್ರಾಪುರ ಮಠದ ಭಕ್ತ ಎನ್ನಲಾಗಿದ್ದ ಶ್ಯಾಮಪ್ರಸಾದ್ ಶಾಸ್ತ್ರೀ ಅವರು ಕೋವಿಯಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಅಂದು ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಆಗಿನ ಸರಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿತ್ತು.

ಈ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು, ರಾಘವೇಶ್ವರ ಶ್ರೀ ವಿರುದ್ಧದ ಪ್ರಕರಣಗಳಲ್ಲಿ ದಿವಾಕರ ಶಾಸ್ತ್ರೀ ಹಾಗೂ ಪ್ರೇಮಲತಾ ಶಾಸ್ತ್ರೀ ದಂಪತಿ ವಿರುದ್ಧ ಹೇಳಿಕೆ ನೀಡಲು ಬೋನಂತಾಯ ಶಿವಶಂಕರ ಭಟ್ ಹಾಗೂ ಡಾ.ಪ್ರಭಾಕರ ಭಟ್ ಅವರು ಶ್ಯಾಮಪ್ರಸಾದ್ ಶಾಸ್ತ್ರಿ ಮೇಲೆ ಒತ್ತಡ ಹೇರಿದರು. ನಿರಾಕರಿಸಿದಲ್ಲಿ ತಾವೂ ಬಂಧನಕ್ಕೊಳಗಾಗಬೇಕಾದೀತು ಎಂದು ಬೆದರಿಸಿದ್ದರು. ಇದರಿಂದ ನೊಂದು ಶ್ಯಾಮ್‌ ಪ್ರಸಾದ್‌ ಶಾಸ್ತ್ರೀ ಸಾವಿಗೆ ಶರಣಾಗಿದ್ದಾರೆ ಎಂದು ಸಾಕ್ಷಿದಾರರ ಹೇಳಿಕೆ ದಾಖಲಿಸಿಕೊಂಡಿದ್ದ ಸಿಐಡಿ ಪೊಲೀಸರು, ಈ ಹೇಳಿಕೆಗಳನ್ನು ಆಧರಿಸಿ ರಾಘವೇಶ್ವರ ಶ್ರೀ, ಡಾ.ಪ್ರಭಾಕರ ಭಟ್‌ ಕಲ್ಲಡ್ಕ ಹಾಗೂ ಬೋನಂತಾಯ ಶಿವಶಂಕರ ಭಟ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

- Advertisement -

Related news

error: Content is protected !!