Thursday, May 16, 2024
spot_imgspot_img
spot_imgspot_img

ಕೇಂದ್ರ ಸರ್ಕಾರದಿಂದ ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮ ಬದಲಾವಣೆ; ಜು.1ರಿಂದಲೇ ಅನ್ವಯ

- Advertisement -G L Acharya panikkar
- Advertisement -

ನವದೆಹಲಿ: ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೆ ಅಥವಾ ರಿನ್ಯೂ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ.

ಹೊಸ ನಿಯಮಗಳ ಅನುಷ್ಠಾನದ ಬಳಿಕ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜುಲೈ 1, 2022 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದೆ.

vtv vitla
vtv vitla

ಇನ್ನು ಚಾಲನಾ ಪರವಾನಗಿ ಪಡೆಯಲು, ಆರ್‌ಟಿಓನಲ್ಲಿ ಟೆಸ್ಟ್ ತೆಗೆದುಕೊಳ್ಳಲು ಕಾಯಬೇಕಾಗಿಲ್ಲ. ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ಟ್ರೈನಿಂಗ್ ಸ್ಕೂಲ್‌ನಲ್ಲಿ ಡಿಎಲ್‌ಗಾಗಿ ನೋಂದಾಯಿಸಿಕೊಳ್ಳಬಹುದು. ಇಲ್ಲಿಂದ ತರಬೇತಿ ಪಡೆದ ನಂತರ ಅಲ್ಲಿಂದಲೇ ಟೆಸ್ಟ್ ಪಾಸ್ ಮಾಡಬೇಕು. ಟೆಸ್ಟ್ ನಲ್ಲಿ ಪಾಸ್ ಆದವರಿಗೆ ಡ್ರೈವಿಂಗ್ ಸ್ಕೂಲ್ ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ ನಿಮ್ಮ ಡಿಎಲ್ ಮಾಡಲಾಗುತ್ತದೆ.

ರಸ್ತೆ ಮತ್ತು ಸಾರಿಗೆ ಸಚಿವಾಲಯವು ತರಬೇತಿ ಕೇಂದ್ರಗಳಿಗೆ ಕೆಲವು ಮಾರ್ಗಸೂಚಿಗಳು ಮತ್ತು ಷರತ್ತುಗಳನ್ನು ನಿಗದಿಪಡಿಸಿದ್ದು ಅದು ಇಂತಿವೆ:

  1. ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಭೂಮಿ ಹೊಂದಿರಬೇಕು. ಭಾರೀ ಪ್ರಯಾಣಿಕ/ಸರಕು ವಾಹನಗಳು ಅಥವಾ ಟ್ರೇಲರ್‌ಗಳಿಗಾಗಿ ತರಬೇತಿ ಕೇಂದ್ರದ ಬಳಿ ಎರಡು ಎಕರೆ ಭೂಮಿಯನ್ನು ಹೊಂದಿರುವುದು ಅವಶ್ಯಕ.
  2. ತರಬೇತುದಾರರು ಕನಿಷ್ಠ 12 ನೇ ತರಗತಿ ತೇರ್ಗಡೆ ಹೊಂದಿರಬೇಕು. ಅಲ್ಲದೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು.
  3. ಡ್ರೈವಿಂಗ್ ಸೆಂಟರ್‌ಗಳ ಪಠ್ಯಕ್ರಮವನ್ನು ಥಿಯರಿ ಮತ್ತು ಪ್ರಾಕ್ಟಿಕಲ್ ಎಂದು 2 ಭಾಗಗಳಾಗಿ ವಿಂಗಡಿಸಲಾಗಿದೆ.
  4. ತರಬೇತಿ ಕೇಂದ್ರದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಹೊಂದಿರುವುದು ಅವಶ್ಯಕವಾಗಿದೆ.
  5. ಕೋರ್ಸ್‌ನ ಅವಧಿಯು ಮಧ್ಯಮ ಮತ್ತು ಭಾರೀ ವಾಹನಗಳ ಮೋಟಾರು ವಾಹನಗಳಿಗೆ 6 ವಾರಗಳಲ್ಲಿ 38 ಗಂಟೆಗಳು. 8 ಗಂಟೆಗಳ ಥಿಯರಿ ತರಗತಿ ಮತ್ತು ಉಳಿದ 31 ಗಂಟೆಗಳ ಪ್ರಾಯೋಗಿಕ ತರಗತಿ ಇರುತ್ತದೆ.
- Advertisement -

Related news

error: Content is protected !!