Monday, April 29, 2024
spot_imgspot_img
spot_imgspot_img

ಕೇರಳ ಗಡಿಭಾಗದಲ್ಲಿ ನಕ್ಸಲ್ ತಂಡ ಸಕ್ರಿಯ..! ಪೊಲೀಸರಿಂದ ಕಾರ್ಯಚರಣೆ ಆರಂಭ

- Advertisement -G L Acharya panikkar
- Advertisement -

ಮಡಿಕೇರಿ: ಕೊಡಗು ಜಿಲ್ಲೆಯ ಕೇರಳ ಗಡಿ ಆರಳಂ ಗ್ರಾಮದಲ್ಲಿ ಮಹಿಳೆ ಸೇರಿದಂತೆ ಶಸ್ತ್ರಸಜ್ಜಿತ ಐವರು ನಕ್ಸಲರು ಕಾಣಿಸಿಕೊಂಡಿದ್ದಾರೆ. ಮನೆಯೊಂದರಲ್ಲಿ ಊಟ ಮಾಡಿ ಅಕ್ಕಿ, ಸಾಬೂನು, ಉಪ್ಪು ತೆಗೆದುಕೊಂಡು ಹೋಗಿದ್ದಾರೆ.

ತಂಡದಲ್ಲಿ ನಕ್ಸಲರ ಕಬಿನಿ, ಬಾಣಾಸುರ ಗುಂಪುಗಳ ಸದಸ್ಯರು ಒಟ್ಟಾಗಿದ್ದರು ಎನ್ನಲಾಗಿದೆ, ಇದುವರೆಗೂ ಈ 2 ಗುಂಪುಗಳ ಸದಸ್ಯರು ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದರು. 5 ತಿಂಗಳಿಂದ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ. ಆದರೆ ಏಕಾಏಕಿ 2 ಗುಂಪುಗಳ ಸದಸ್ಯರು ಒಟ್ಟಾಗಿ ಕಾಣಿಸಿಕೊಂಡಿದ್ದು ನಕ್ಸಲ್ ನಿಗ್ರಹ ಪಡೆಯ ಅಚ್ಚರಿಗೆ ಕಾರಣವಾಗಿದೆ.

ಈ ಬೆಳವಣಿಗೆಯಿಂದ ಎಚ್ಚೆತ್ತಿರುವ ಪೊಲೀಸರು ಕೊಡಗಿನ ಕುಟ್ಟ, ಆರ್ಜಿ ಸೇರಿದಂತೆ ಗಡಿ ಭಾಗಗಳಲ್ಲಿ ಕಾರ್ಯಾಚರಣೆ ಆರಂಭಿಸಿವೆ.

- Advertisement -

Related news

error: Content is protected !!