Thursday, May 2, 2024
spot_imgspot_img
spot_imgspot_img

ಕೇರಳ ಬಂಕ್‌ಗಳು ಖಾಲಿ; ಗಡಿ ಪೆಟ್ರೋಲ್‌ ಬಂಕ್‌ಗಳಲ್ಲಿ ಮುಗಿಬಿದ್ದ ಕೇರಳಿಗರು.!

- Advertisement -G L Acharya panikkar
- Advertisement -

ಕೇಂದ್ರ ಸರಕಾರ ಪೆಟ್ರೋಲ್‌, ಡೀಸೆಲ್‌ ಮೇಲಿನ ತೆರಿಗೆ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕ ಸರಕಾರವೂ ತೈಲ ದರ ಇಳಿಕೆಗೆ ಕ್ರಮ ಕೈಗೊಂಡಿದ್ದರಿಂದ ತಲಪಾಡಿ, ಜಾಲ್ಸೂರು ಸೇರಿದಂತೆ ಕೇರಳ – ಕರ್ನಾಟಕ ಗಡಿ ಪ್ರದೇಶಗಳಲ್ಲಿರುವ ಕರ್ನಾಟಕದ ಪೆಟ್ರೋಲ್‌ ಬಂಕ್‌ಗಳಲ್ಲಿ ವಾಹನಗಳ ದಟ್ಟಣೆ ಕಾಣಿಸುತ್ತಿದೆ.

ಸಾಂದರ್ಭಿಕ ಚಿತ್ರ

ಅತ್ತ ಕೇರಳ ಭಾಗದ ಬಂಕ್‌ಗಳು ಬಿಕೋ ಎನ್ನುತ್ತಿವೆ. ಕಾರಣ ಡೀಸೆಲ್‌ಗೆ 8.5 ರೂ. ಮತ್ತು ಪೆಟ್ರೋಲ್‌ಗೆ 5.5 ರೂ. ವ್ಯತ್ಯಾಸ ಇರುವುದು. ತಲಪಾಡಿಯ ಕೇರಳ ಪೆಟ್ರೋಲ್‌ ಬಂಕ್‌ನಲ್ಲಿ ಒಂದು ವಾರದಿಂದ ಗ್ರಾಹಕರಿಲ್ಲದೆ ವ್ಯವಹಾರಕ್ಕೆ ನಷ್ಟವಾಗಿದೆ. ದಿನವೊಂದಕ್ಕೆ 6,000 ಲೀಟರ್‌ಗೂ ಹೆಚ್ಚು ಪೆಟ್ರೋಲ್‌, ಡೀಸೆಲ್‌ ಮಾರಾಟವಾಗುತ್ತಿದ್ದರೆ ಈಗ 2 ಸಾವಿರ ಲೀ. ದಾಟುವುದು ಕಷ್ಟಕರವಾಗಿದೆ. ಪಂಪ್‌ಗೆ ಶೇ. 75ರಷ್ಟು ನಷ್ಟ ಉಂಟಾಗಿದೆ.

ಸಾಂದರ್ಭಿಕ ಚಿತ್ರ

ಇದೇ ವೇಳೆ ತಲಪಾಡಿಯಲ್ಲಿ ಕರ್ನಾಟಕ ಭಾಗದಲ್ಲಿರುವ ಬಂಕ್‌ ಟೋಲ್‌ ಗೇಟಿಗೂ ಮೊದಲೇ ಇರುವುದರಿಂದ ಕೇರಳ ಭಾಗದ ವಾಹನ ಚಾಲಕರು ಇಲ್ಲಿಗೆ ಬಂದು ಇಂಧನ ತುಂಬಿಸಿ ಹೋಗುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

- Advertisement -

Related news

error: Content is protected !!