Friday, May 10, 2024
spot_imgspot_img
spot_imgspot_img

ಕೇಸರಿ ಶಾಲು ಧಾರಿ ಯುವಕರಿಂದ ನಡುರಸ್ತೆಯಲ್ಲಿ ಆದಿವಾಸಿ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ.! ವ್ಯಾಪಕ ಆಕ್ರೋಶ

- Advertisement -G L Acharya panikkar
- Advertisement -

ಮಧ್ಯಪ್ರದೇಶ: ಅಲಿರಾಜ್‌ಪುರ ಜಿಲ್ಲೆಯಿಂದ ಅಮಾನವೀಯ ಘಟನೆಯ ವಿಡಿಯೋವೊಂದು ವೈರಲ್ ಆಗಿದೆ. ಕೇಸರಿ ಶಾಲು ದಾರಿ ಯುವಕರ ಗುಂಪು ನಡುರಸ್ತೆಯಲ್ಲಿ ಇಬ್ಬರು ಆದಿವಾಸಿ ಬಾಲಕಿಯರಿಗೆ ಸಾಮೂಹಿಕವಾಗಿ ಲೈಂಗಿಕ ಕಿರುಕುಳ ನೀಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಭಗೋರಿಯಾ ಹಬ್ಬದ ಸಂದರ್ಭದಲ್ಲಿ ಯುವಕರ ತಂಡ ಮೆರವಣಿಗೆ ನಡೆಸಿದೆ. ಈ ವೇಳೆ ಬೀದಿ ಬಳಿ ನಿಂತಿದ್ದ ಬಾಲಕಿಯರಿಬ್ಬರನ್ನು ಅಟ್ಟಾಡಿಸಿ ಹಿಡಿದು ಕೇಸರಿ ಶಾಲು ಧರಿಸಿದ ಕೆಲವು ದುಷ್ಕರ್ಮಿಗಳು ಲೈಂಗಿಕ ಕಿರುಕುಳ ನೀಡಿದ್ದಾರೆ. ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಂಡು ಕ್ರಮ ಜರುಗಿಸಿದ್ದಾರೆ ಎಂದು ಅಲಿರಾಜ್‌ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ಹೇಳಿದ್ದಾರೆ.

ಮಧ್ಯಪ್ರದೇಶದಲ್ಲಿ ಬುಡಕಟ್ಟು ಸಮುದಾಯಗಳು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಭಗೋರಿಯಾವನ್ನು ಆಯೋಜಿಸಲಾಗುತ್ತದೆ. ಇದು ಆದಿವಾಸಿಗಳ ದೊಡ್ಡ ಹಬ್ಬವೆಂದು ಪರಿಗಣಿಸಲ್ಪಟ್ಟಿದೆ. ಹಬ್ಬವನ್ನು ಆಚರಿಸುವಾಗ ಘಟನೆ ನಡೆದಿದೆ. ಈ ಬಗ್ಗೆ ದಿ ದಲಿತ ವಾಯ್ಸ್ ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿದೆ.

- Advertisement -

Related news

error: Content is protected !!