Friday, August 7, 2026
spot_imgspot_img
spot_imgspot_img

ಕೈಕಂಬ: ಓವರ್‌ಟೇಕ್‌ ಮಾಡುವ ವೇಳೆ ಬೈಕ್‌ ಸ್ಕಿಡ್‌; ಬೈಕ್ ಸವಾರ ಸಾವು

- Advertisement -
- Advertisement -

ಕೈಕಂಬ: ಓವರ್‌ಟೇಕ್‌ ಮಾಡುವ ವೇಳೆ ಬೈಕ್‌ ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ಗಂಜಿಮಠ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗುರುಪುರ ಕೈಕಂಬದಲ್ಲಿ‌ ನಡೆದಿದೆ.

ಮೂಡು ಬಿದಿರೆಯಿಂದ ಕೈಕಂಬದ ಕಡೆಗೆ ಬೈಕ್‌ನಲ್ಲಿ ಬರುತ್ತಿದ್ದ ಕೆರೆಕಾಡಿನ ಪ್ರವೀಣ್‌ (36) ಬೈಕ್ ವೊಂದನ್ನು ಗಂಜಿಮಠ ಗುರುಪುರ ಕೈಕಂಬದ ಸಮೀಪ ಓವರ್‌ಟೇಕ್‌ ಮಾಡುವ ವೇಳೆ ಬೈಕ್‌ ಸ್ಕಿಡ್‌ ಕಾರಿನಡಿಗೆ ಅವರು ಬಿದ್ದಿದ್ದಾರೆ. ಘಟನೆಯಲ್ಲಿ ಪ್ರವೀಣ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಮಳೆ ಬಂದ ಕಾರಣ ಹೆದ್ದಾರಿ ಜಾರುತ್ತಿದ್ದು ಪ್ರವೀಣ್‌ ಅವರು ಹೆಲ್ಮೆಟ್‌ ಹಾಕದೇ ಇರುವುದು ಸಾವಿಗೆ ಕಾರಣವಾಗಿದೆ. ಅಪಘಾತದ ವೀಡಿಯೋ ವೈರಲ್‌ ಆಗಿದೆ.

ಕೆರೆಕಾಡು ನಿವಾಸಿ ಪ್ರವೀಣ್ ಕೂಲಿ‌ ಕೆಲಸ ಮಾಡುತ್ತಿದ್ದು, ಹಲವಾರು ವರ್ಷಗಳಿಂದ ಮಂಗಳೂರು, ಮೂಡುಬಿದಿರೆಯ ಹಲವಾರು ತಂಡದಲ್ಲಿ ವೇಷ ಹಾಕುತ್ತಿದ್ದರು.

- Advertisement -

Related news

error: Content is protected !!