Saturday, May 4, 2024
spot_imgspot_img
spot_imgspot_img

ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಹಿನ್ನಲೆ ಮಡಿಕೇರಿಯಲ್ಲಿ ಮೊಕ್ಕಾಂ ಹೂಡಿದ ಎಡಿಜಿಪಿ ಅಲೋಕ್‌ ಕುಮಾರ್‌

- Advertisement -G L Acharya panikkar
- Advertisement -

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್‌ ಕುಮಾರ್‌ ಮಡಿಕೇರಿಯಲ್ಲೆ ಮೊಕ್ಕಾಂ ಹೂಡಿದ್ದಾರೆ.

ಜಿಲ್ಲೆಗೆ ಹೆಚ್ಚುವರಿ ಸಶಸ್ತ್ರ ಪಡೆಗಳು ಆಗಮಿಸಿದ್ದು, ಕೆಎಸ್‌ಆರ್ ಪಿ, ಜಿಲ್ಲಾ ಮೀಸಲು ಪಡೆ ಸೇರಿದಂತೆ ಪೊಲೀಸರಿಂದ ಸಾರ್ವಜನಿಕರಲ್ಲಿ ಧೈರ್ಯ ತುಂಬಲು ಮಡಿಕೇರಿ ನಗರದಲ್ಲಿ ಮೂರು ಕಿಲೋ ಮೀಟರ್ ಪಥಸಂಚಲನ ನಡೆದಿದೆ.

ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಮೊಟ್ಟು ಎಸೆತ ಪ್ರಕರಣ ಸಂಬಂಧ ಆಗಸ್ಟ್ 26 ರಂದು ಕಾಂಗ್ರೆಸ್ ಮಡಿಕೇರಿ ಚಲೋ ಮತ್ತು ಜನ ಜಾಗೃತಿ ಸಭೆ ಆಯೋಜಿಸಿದ್ದವು. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಕೊಡಗು ಜಿಲ್ಲಾಡಳಿತ 5 275 ಸಂಜೆ 6 ಗಂಟೆಯವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿದೆ.

ನಿಷೇಧಾಜ್ಞೆ, ಹಿನ್ನೆಲೆಯಲ್ಲಿ ಮಡಿಕೇರಿ ಚಲೋ ಮತ್ತು ಜನ ಜಾಗೃತಿ ಸಮಾವೇಶವನ್ನು ಕಾಂಗ್ರೆಸ್ ಮತ್ತು ಬಿಜೆಪಿ ಮುಂದೂಡಿದೆ.

vtv vitla
- Advertisement -

Related news

error: Content is protected !!