Sunday, May 5, 2024
spot_imgspot_img
spot_imgspot_img

ಕೊಡಾಜೆ : ಹಾಜಿ ಪಿ.ಕೆ.ಆದಂ ದಾರಿಮಿ ಅವರಿಗೆ ಬೀಳ್ಕೊಡುಗೆ ಹಾಗೂ ಮದ್ರಸ ಕಟ್ಟಡದ ಉದ್ಘಾಟನೆ

- Advertisement -G L Acharya panikkar
- Advertisement -
vtv vitla

ವಿಟ್ಲ: ಮಾಣಿ-ಕೊಡಾಜೆಯ ಬದ್ರಿಯಾ ಜುಮಾ ಮಸೀದಿ ಇದರ ವತಿಯಿಂದ ಇಲ್ಲಿ ಸುಮಾರು 32 ವರ್ಷಗಳ ಕಾಲ ಮುದರ್ರಿಸ್, ಖತೀಬ್‌ರಾಗಿ ಸೇವೆ ಸಲ್ಲಿಸಿದ ಹಾಜಿ ಪಿ.ಕೆ.ಆದಂ ದಾರಿಮಿ ಅವರಿಗೆ ಬೀಳ್ಕೊಡುಗೆ ಹಾಗೂ ಕೊಡಾಜೆ ತರ್ಬಿಯತುಲ್ ಇಸ್ಲಾಂ ಮದರಸ ಇದರ ಮೇಲಂತಸ್ತಿನ ಕಟ್ಟಡದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.

ಮುಹಮ್ಮದ್ ಶಮೀಮ್ ತಂಙಳ್ ಕುಂಬೋಲ್ ಮದ್ರಸ ಮೇಲಂತಸ್ತಿನ ಕಟ್ಟಡವನ್ನು ಉದ್ಘಾಟಿಸಿ ದು:ಹಾ ನೆರವೇರಿಸಿದರು. ಮಸೀದಿ ಅಧ್ಯಕ್ಷ ಇಬ್ರಾಹಿಂ ರಾಜ್ ಕಮಲ್ ಅಧ್ಯಕ್ಷತೆ ವಹಿಸಿದ್ದರು.

ಸನ್ಮಾನ ಸ್ವೀಕರಿಸಿದ ಹಾಜಿ ಪಿ.ಕೆ.ಆದಂ ದಾರಿಮಿ ಮಾತನಾಡಿ ನನ್ನ ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದರು. ಎಸ್.ಬಿ.ದಾರಿಮಿ ಮಾತನಾಡಿ ಆದಂ ದಾರಿಮಿ ಅವರು 32 ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದಾರೆ ಎಂದಾದರೆ ಅವರ ಹಾಗೂ ಕೊಡಾಜೆ ಜಮಾಅತಿಗರ ಸಹನೆ ಹಾಗೂ ತಾಳ್ಮೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೆ.ಅಬೂಬಕ್ಕರ್ ಕೊಡಾಜೆ, ಯೂಸುಫ್ ಹಾಜಿ ನೌಫಲ್, ಅದ್ದ ಹಾಜಿ ಕೊಡಾಜೆ, ಇಬ್ರಾಹಿಂ ಹಾಜಿ ಮಾಣಿ, ಮಸೀದಿ ಕೋಶಾಧಿಕಾರಿ ರಫೀಕ್ ಹಾಜಿ ಸುಲ್ತಾನ್, ಕಾರ್ಯದರ್ಶಿ ನವಾಝ್ ಭಗವಂತಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಆದಿಂ ದಾರಿಮಿ ಅವರಿಗೆ ಹೊಸ ಆಲ್ಟೋ 800 ಕಾರ್ ಉಡುಗೊರೆಯಾಗಿ ನೀಡಲಾಯಿತು. ಕೊಡಾಜೆ ಬದ್ರಿಯಾ ಜುಮಾ ಮಸೀದಿ ಖತೀಬ್ ಅಬ್ದುಲ್ ಅಝೀಝ್ ದಾರಿಮಿ ಪ್ರಸ್ತಾವನೆ ಗೈದರು. ಇಬ್ರಾಹಿಂ ಕೆ.ಮಾಣಿ ಸನ್ಮಾನಿತರನ್ನು ಪರಿಚಯಿಸಿದರು. ಇಲ್ಯಾಸ್ ನೇರಳಕಟ್ಟೆ ಸ್ವಾಗತಿಸಿ, ನಿರೂಪಿಸಿದರು.

- Advertisement -

Related news

error: Content is protected !!