- Advertisement -
- Advertisement -
ಕಾಬುಲ್: ಕೇವಲ 24 ಗಂಟೆ ಅವಧಿಯಲ್ಲಿ 262 ತಾಲಿಬಾನ್ ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಅಫ್ಘಾನಿಸ್ತಾನದ ರಕ್ಷಣಾ ಸಚಿವಾಲಯ ತಿಳಿಸಿದೆ. ಅಫ್ಘಾನ್ ಪಡೆಗಳ ಕಾರ್ಯಾಚರಣೆಯಲ್ಲಿ 176 ತಾಲಿಬಾನ್ ಭಯೋತ್ಪಾದಕರು ಗಾಯಗೊಂಡಿದ್ದು, 21 ಐಇಡಿ(IED) ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಸಚಿವಾಲಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ತಾಲಿಬಾನ್ ಭಯೋತ್ಪಾದಕರ ನಗರಗಳ ಆಕ್ರಮಣ ತಡೆಯುವ ಪ್ರಯತ್ನವಾಗಿ ಅಫ್ಘಾನಿಸ್ತಾನ ಸರ್ಕಾರವು ದೇಶದ ಬಹುತೇಕ ಎಲ್ಲೆಡೆ ಕರ್ಫ್ಯೂ ವಿಧಿಸಿದೆ ಎಂದು ವರದಿಯಾಗಿದೆ.
ರಾಜಧಾನಿ ಕಾಬೂಲ್ ಮತ್ತು ಇತರ 2 ಪ್ರಾಂತ್ಯಗಳನ್ನು ಹೊರತುಪಡಿಸಿ ರಾತ್ರಿ 10 ರಿಂದ ಬೆಳಗ್ಗೆ 4 ಗಂಟೆವರೆಗೆ ಯಾವುದೇ ಸಂಚಾರಕ್ಕೆ ಅನುಮತಿ ಇರುವುದಿಲ್ಲವೆಂದು ತಿಳಿಸಲಾಗಿದೆ. ಕಳೆದ 2 ತಿಂಗಳಲ್ಲಿ ಅಂತಾರಾಷ್ಟ್ರೀಯ ಪಡೆಗಳು ದೇಶದಿಂದ ಹಿಂದೆ ಸರಿದಿರುವುದರಿಂದ ತಾಲಿಬಾನ್ ಮತ್ತು ಅಫಘಾನ್ ಸರ್ಕಾರಿ ಪಡೆಗಳ ನಡುವಿನ ಹೋರಾಟ ಉಲ್ಬಣಗೊಂಡಿದೆ ಎಂದು ವರದಿಯಾಗಿದೆ.
- Advertisement -