Thursday, May 9, 2024
spot_imgspot_img
spot_imgspot_img

ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಹೊಸ ಮಿಕ್ಸಿ ಬ್ಲಾಸ್ಟ್‌ – ಓರ್ವನಿಗೆ ಗಾಯ

- Advertisement -G L Acharya panikkar
- Advertisement -

ಕುಕ್ಕರ್‍ ಸ್ಪೋಟದ ಬಳಿಕ ಮಿಕ್ಸಿ ಸ್ಪೋಟಗೊಂಡು ಎಲ್ಲರಲ್ಲೂ ಆತಂಕ ಉಂಟಾದ ಘಟನೆ ನಡೆದಿದೆ. ಕೊರಿಯರ್ ಶಾಪ್‌ಗೆ ಪಾರ್ಸೆಲ್ ಬಂದಿದ್ದ ಮಿಕ್ಸಿ ಸ್ಪೋಟಗೊಂಡಿದೆ. ಇದರಿಂದ ಅಂಗಡಿ ಮಾಲೀಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಹಾಸನದ ಕೆ.ಆರ್.ಪುರಂ ರಸ್ತೆಯಲ್ಲಿನ ಅಂಗಡಿಯಲ್ಲಿ ನಿನ್ನೆ ಸಂಜೆ ಘಟನೆ ನಡೆದಿದೆ‌. ಮಿಕ್ಸಿ ಸ್ಫೋಟಗೊಂಡಿದ್ದರಿಂದ ಅತಂಕದ ವಾತಾವರಣ ನಿರ್ಮಾಣವಾಗಿತ್ತು.

ಗಂಭೀರವಾಗಿ ಗಾಯಗೊಂಡ ಶಾಪ್‌ ಮಾಲೀಕ ಶಶಿ ಎಂಬುವವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಹಿಂದೆ ಕೊರಿಯರ್‌ ಶಾಪ್‌ಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಅದನ್ನು ನಗರದ ವ್ಯಕ್ತಿಯೊಬ್ಬರಿಗೆ ಕೊರಿಯರ್‌ ಶಾಪ್‌ ಮಾಲೀಕ ಹೋಮ್‌ ಡೆಲಿವರಿ ಮಾಡಿದ್ದರು. ಆದರೆ ಮಿಕ್ಸಿಗೆ ನಾನು ಆರ್ಡರ್ ಮಾಡಿಲ್ಲ ಎಂದು ಕೊರಿಯರ್‌ ಶಾಪ್‌ಗೆ ವ್ಯಕ್ತಿ ವಾಪಸ್ ನೀಡಿದ್ದಾನೆ.

ವಾಪಸ್ ಪಡೆಯುವ ವೇಳೆ ಮಿಕ್ಸಿ ಆನ್ ಮಾಡಿ ಪರಿಶೀಲಿಸಿದಾಗ ಮಿಕ್ಸಿ ಬ್ಲಾಸ್ಟ್‌ ಆಗಿದೆ‌ ಎನ್ನಲಾಗಿದೆ. ಆಸ್ಪತ್ರೆಗೆ ಎಸ್‌ಪಿ ಹರಿರಾಮ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!