Friday, March 29, 2024
spot_imgspot_img
spot_imgspot_img

ಕೊರೊನಾ ಸೋಂಕು ಪ್ರಕರಣ ಹೆಚ್ಚಳ ಹಿನ್ನೆಲೆ: ದೆಹಲಿಯಲ್ಲಿ ಮತ್ತೂ ಒಂದು ವಾರ ಲಾಕ್ ಡೌನ್

- Advertisement -G L Acharya panikkar
- Advertisement -

ನವದೆಹಲಿ: ದೇಶದ ರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳ ಏರಿಕೆ ಕಡಿಮೆಯಾಗದ ಹಿನ್ನೆಲೆ ಈಗಾಗಲೇ ಜಾರಿಯಲ್ಲಿದ್ದ ಲಾಕ್​ಡೌನ್​ನ್ನು ಮತ್ತೊಂದು ವಾರ ಮುಂದುವರೆಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶ ನೀಡಿದ್ದಾರೆ.

ಏಪ್ರಿಲ್ 19 ರಂದು ಅರವಿಂದ್ ಕೇಜ್ರಿವಾಲ್ ಒಂದು ವಾರ ಕಾಲ ಲಾಕ್​ಡೌನ್ ಘೋಷಣೆ ಮಾಡಿದ್ದರು. ಬಳಿಕ ಏಪ್ರಿಲ್ 25 ರಂದು ಮತ್ತೊಂದು ವಾರ ಲಾಕ್​ಡೌನ್​ ಘೋಷಿಸಿ ಆದೇಶ ಹೊರಡಿಸಿದ್ರು. ಇದೀಗ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇದೀಗ ಮತ್ತೊಂದು ವಾರದ ಲಾಕ್​ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ದೆಹಲಿಯಲ್ಲಿ ಸೋಂಕು ಪ್ರಕರಣಗಳ ಏರಿಕೆ ಮಾತ್ರವಲ್ಲದೇ ಆಕ್ಸಿಜನ್, ಐಸಿಯು ಬೆಡ್​, ವೆಂಟಿಲೇಟರ್​ಗಳ ಸಮಸ್ಯೆಯೂ ಎದುರಾಗಿದ್ದು ಈ ಕುರಿತು ದೆಹಲಿ ಹೈಕೋರ್ಟ್ ಕೇಜ್ರಿವಾಲ್ ಸರ್ಕಾರಕ್ಕೆ ತರಾಟೆ ತೆಗೆದುಕೊಂಡಿತ್ತು. ನಿಮ್ಮಿಂದ ಆಕ್ಸಿಜನ್ ಪ್ಲಾಂಟ್​ಗಳ ನಿರ್ವಹಣೆ ಮಾಡಲಾಗದಿದ್ರೆ ಹೇಳಿ.. ಅದನ್ನ ಕೇಂದ್ರ ಸರ್ಕಾರದ ಅಧಿಕಾರಿಗಳಿಗೆ ನೀಡ್ತೇವೆ ಎಂದು ಕೋರ್ಟ್ ಹೇಳಿತ್ತು.

driving
- Advertisement -

Related news

error: Content is protected !!