Thursday, May 2, 2024
spot_imgspot_img
spot_imgspot_img

ಕೊಲ್ಲೂರು: ಶಾಲಾ ಬಾಲಕ ನಾಪತ್ತೆ; ದೂರು ದಾಖಲು

- Advertisement -G L Acharya panikkar
- Advertisement -
vtv vitla

ಕೊಲ್ಲೂರು: ಮನೆಯಿಂದ ಹೊರಟು ಹೋದ ಬಾಲಕನೋರ್ವ ವಾಪಸ್ಸು ಬಾರದೇ ನಾಪತ್ತೆಯಾದ ಘಟನೆ ಕೊಲ್ಲೂರಿನಲ್ಲಿ ನಡೆದಿದೆ. ಏಪ್ರಿಲ್ 11 ರಂದು ಮನೆಯಿಂದ ಹೊರಟು ಹೋದವನು ವಾಪಸು ಬಾರದೇ ನಾಪತ್ತೆಯಾದ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.

ಕೊಲ್ಲೂರು ಶ್ರೀ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ಸಲಗೇರಿ ಕಂಟಗದ್ದೆ ನಿವಾಸಿ ದೇವದತ್ತ (16) ನಾಪತ್ತೆಯಾದ ಬಾಲಕ.

4 ಅಡಿ 5 ಇಂಚು ಎತ್ತರ, ಕೋಲು ಮುಖ, ಸಾಧಾರಣ ಶರೀರ, ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಹಾಗೂ ಮಲೆಯಾಳಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೊಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ: 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434 ಹಾಗೂ ಕಂಟ್ರೋಲ್ ರೂಂ : 100 (0820-2526444) ಅನ್ನು ಸಂಪರ್ಕಿಸಬಹುದಾಗಿದೆ ಎಂದು ಕೊಲ್ಲೂರು ಪೊಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!