Saturday, April 20, 2024
spot_imgspot_img
spot_imgspot_img

ಕೋಣಾಜೆ: ಬಿಜೆಪಿ ಪ್ರಮುಖನ ಮೇಲೆ ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಮೂವರು ಅಪರಿಚಿತರು!!

- Advertisement -G L Acharya panikkar
- Advertisement -

ಉಳ್ಳಾಲ: ಇಲ್ಲಿನ ಕೊಣಾಜೆ ವಿ.ವಿ ಕ್ಯಾಂಪಸ್ ಹಾಸ್ಟೆಲ್ ಬಳಿ ಬೈಕ್ ನಲ್ಲಿ ಹೊಂಚು ಹಾಕಿ ಕುಳಿತಿದ್ದ ಮೂವರು ಅಪರಿಚಿತರು ಬಿಜೆಪಿ ಪ್ರಮುಖನ ಮೇಲೆ ತಲವಾರು ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕೊಣಾಜೆ ಗ್ರಾ.ಪಂ. ಮಾಜಿ ಸದಸ್ಯ ಬಿಜೆಪಿ ಪ್ರಮುಖ ಪ್ರಕಾಶ್ ಶೆಟ್ಟಿ(41) ಎಂಬವರ ಮೇಲೆ ತಲವಾರು ದಾಳಿ ನಡೆದಿದ್ದು, ಸಣ್ಣ ಪುಟ್ಟ ಗಾಯದಿಂದ ಅವರು ಪಾರಾಗಿದ್ದಾರೆ.

ಘಟನೆಯ ವಿವರ:
ಕೊಣಾಜೆ ವಿವಿ ಆವರಣದ ಹಾಸ್ಟೆಲ್ ಬಳಿಯ ದುರ್ಗಾ ಫ್ಯಾನ್ಸಿ & ಜನರಲ್ ಸ್ಟೋರ್ ನ ಮಾಲಕ ಪ್ರಕಾಶ್ ಅವರು ಸೋಮವಾರ ರಾತ್ರಿ 9.30 ಗಂಟೆಗೆ ಅಂಗಡಿ ಬಂದ್ ಮಾಡಿ ಮನೆ ಕಡೆಗೆ ಹೊರಟಿದ್ದರು. ಈ ವೇಳೆ ಅಂಗಡಿಯಿಂದ ಸ್ವಲ್ಪ ದೂರದಲ್ಲಿ ಪಲ್ಸರ್ ಬೈಕಿನಲ್ಲಿ ಕಾದು ಕುಳಿತಿದ್ದ ಮೂವರು ಯುವಕರನ್ನು ಪ್ರಕಾಶ್ ಅವರು ಗಮನಿಸಿದ್ದರು ಎನ್ನಲಾಗಿದೆ.

ಹೀಗಾಗಿ ಪ್ರಕಾಶ್ ಅವರು ಪರಿಚಯಸ್ಥ ಮಂಜುನಾಥ್ ಎಂಬವರ ಬೈಕ್ ನಲ್ಲಿ ಹೊರಟಾಗ ಹಿಂದಿನಿಂದ ಬೈಕ್ ನಲ್ಲಿ ಹಿಂಬಾಲಿಸಿದ ದುಷ್ಕರ್ಮಿಗಳು ಪ್ರಕಾಶ್ ಅವರನ್ನು ಗುರಿಯಾಗಿಸಿ ತಲವಾರು ಬೀಸಿದ್ದಾರೆ. ತಲವಾರು ಏಟನ್ನು ತಪ್ಪಿಸಲು ಯತ್ನಿಸಿದಾಗ ಇವರ ಬೈಕ್ ಉರುಳಿ ಬಿದ್ದಿದೆ. ಕೂಡಲೇ ಬೈಕ್ ಸವಾರ ಹಾಗೂ ಪ್ರಕಾಶ್ ಹತ್ತಿರದ ಜನ ವಸತಿ ಸ್ಥಳಕ್ಕೆ ಓಡಿ ಬಚಾವಾಗಿದ್ದಾರೆ. ಪ್ರಕಾಶ್ ಬಲ ಕೈಗೆ ತಲವಾರಿನ ಏಟು ತಗಲಿದೆ. ಈ ಬಗ್ಗೆಅವರು ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!