Monday, August 31, 2026
spot_imgspot_img
spot_imgspot_img

ಕೋರ್ಟ್ ಆವರಣದಲ್ಲಿ ದುರ್ವರ್ತನೆ ಆರೋಪದಲ್ಲಿ ವಕೀಲ ಜಗದೀಶ್ ಅಂದರ್..!

- Advertisement -
- Advertisement -

ಬೆಂಗಳೂರು: ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ವಕೀಲರ ಗಲಾಟೆ ಪ್ರಕರಣ ಸಂಬಂಧ ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದ ನಿಯೋಗದ ದೂರಿನ ಹಿನ್ನಲೆಯಲ್ಲಿ, ವಕೀಲ ಜಗದೀಶ್ ಅವರನ್ನು, ಪೊಲೀಸರು ಬಂಧಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಂತ ಗಲಾಟೆ ಪ್ರಕರಣ ಸಂಬಂಧ, ಕೋರ್ಟ್ ಆವರಣದಲ್ಲಿ ದುರ್ವರ್ತನೆ ತೋರಿರೋದಾಗಿ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ನೇತೃತ್ವದ ನಿಯೋಗವು ಶನಿವಾರ, ಪೊಲೀಸರಿಗೆ ವಕೀಲ ಜಗದೀಶ್ ವಿರುದ್ಧ ದೂರು ನೀಡಿತ್ತು.

ಈ ದೂರಿನ ಹಿನ್ನಲೆಯಲ್ಲಿ ಹಲಸೂರು ಗೇಟ್ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದಾರೆ. ಬಂಧಿತ ವಕೀಲ ಜಗದೀಶ್ ಅವರನ್ನು, ಇಂದು ಸಂಜೆಯೊಳಗೆ ಕೋರಮಂಗಲ ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!